ಜಮ್ಮು-ಕಾಶ್ಮೀರ: ಉಗ್ರರ ಮುಖ್ಯ ಕಚೇರಿಯಾಗಿದೆ ಶ್ರೀನಗರ ಕೇಂದ್ರೀಯ ಜೈಲು ! (ಸಂಗ್ರಹ ಚಿತ್ರ) 
ದೇಶ

ಶ್ರೀನಗರ ಸೆಂಟ್ರಲ್ ಜೈಲು ಉಗ್ರರ ಮುಖ್ಯ ನೇಮಕಾತಿ ಕೇಂದ್ರ: ಜಮ್ಮು-ಕಾಶ್ಮೀರ ಸಿಐಡಿ ವರದಿ

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಕೇಂದ್ರೀಯ ಕಾರಾಗೃಹ ಉಗ್ರರ ಮುಖ್ಯಕಚೇರಿಯಾಗಿದ್ದು, ಉಗ್ರರ ನೇಮಕಾತಿ, ನಿಯೋಜನೆ ಇಲ್ಲಿಂದಲೇ ನಡೆಯುತ್ತಿದೆ...

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಕೇಂದ್ರೀಯ ಕಾರಾಗೃಹ ಉಗ್ರರ ಮುಖ್ಯಕಚೇರಿಯಾಗಿದ್ದು, ಉಗ್ರರ ನೇಮಕಾತಿ, ನಿಯೋಜನೆ ಇಲ್ಲಿಂದಲೇ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ. 
ಶ್ರೀನಗರ ಕೇಂದ್ರೀಯ ಜೈಲು, ಉಗ್ರರ ನೇಮಕಾತಿಯ ತಾಣವಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಸಿಐಡಿ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದೆ. 
ಪರ್ಯಾಯ ಆಡಳಿತಾತ್ಮಕ ವ್ಯವಸ್ಥೆಯನ್ನೇ ಸ್ಥಾಪಿಸಿರುವ ಇಲ್ಲಿನ ಕೈದಿಗಳು, ಉಗ್ರರ ನೇಮಕಾತಿ ಚಟುವಟಿಕೆಗಳಲ್ಲಿ ನಿರರಾದ ಬಗ್ಗೆ ಹಲವು ಮುನ್ನೆಚ್ಚರಿಕೆಯ ಹೊರತಾಗಿಯೂ ಇಲ್ಲಿನ ಪೊಲೀಸರು ಈ ಅಂಶವನ್ನು ನಿರ್ಲಕ್ಷಿಸಿದ್ದಾರೆಂದು ಹೇಳಲಾಗುತ್ತಿದೆ. 
ಒಳಗಿನಿಂದ ಒಪ್ಪಿಗೆ ಸಿಕ್ಕ ಬಳಿಕ ಮಾತ್ರ ಹೊಸ ಉಗ್ರನ  ನೇಮಕ ಮಾಡಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರೀಯ ಜೈಲಿನ ಪಾತ್ರ ಮುಖ್ಯವಾಗಿದೆ. ಆದಾಗಿಯೂ,ಿ ಇಂತಹ ಒಪ್ಪಿಗೆ ಯಾರು ನೀಡುತ್ತಾರೆಂಬ ಪರಿಶೀಲನೆ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಂತೆ, ಜೈಲಿನೊಳಗೆ ಕೈದಿಗಳದ್ದೂ ಪರ್ಯಾಯ ಆಡಳಿತ ವ್ಯವಸ್ಥೆಯಿದೆ. 
6 ಜನರ ಘೋಷಿತ ಆಡಳಿತ ಮಂಡಳಿಗೆ ಒಬ್ಬ ಮುಖ್ಯಸ್ಥನೂ ಕೂಡ ಇರುತ್ತಾನೆ. ಈ ಮಂಡಳಿ 6 ತಿಂಗಳಿಗೊಮ್ಮೆ ಬದಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 
ಕೈದಿಗಳು ಇಲ್ಲಿನ ಜೈಲು ಸಿಬ್ಬಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆಗಳನ್ನು ಹಾಕುವುದರಿಂದ ಇದು ಮೇಲಾಧಿಕಾರಿಗಳ ಗಮನಕ್ಕೂ ಬರುತ್ತಿಲ್ಲ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!