ದೇಶ

ಬಿಜೆಪಿಗಿಂತಲೂ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ

Srinivasamurthy VN
ದಿಸ್ ಪುರ್: ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಎಐಯುಡಿಎಫ್ ಸಂಘಟನೆ ವೇಗವಾಗಿ ಬೆಳೆಯುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಅಸ್ಸಾಂ ಕೆಲ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯಾಬಲ ಗಣನೀಯ ಪ್ರಮಾಣದಲ್ಲಿ ಏರಿಕೆಗುತ್ತಿದೆ ಎಂಬ ವರದಿಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಬಿಪಿನ್ ರಾವತ್ ಅವರು, ಪಾಕಿಸ್ತಾನ ಚೀನಾದೇಶದ ನೆರವನೊಂದಿಗೆ  ಭಾರತ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಇದಕ್ಕೆ ಬಾಂಗ್ಲಾ ಗಡಿಯಲ್ಲಿರುವ ಅಸ್ಸಾಂಗೆ ಅಕ್ರಮ ಬಾಂಗ್ಲಾದೇಶೀಯರನ್ನು ರವಾನೆ ಮಾಡಿ ಈ ಪ್ರಾಂತ್ಯದ ಅಶಾಂತಿಯನ್ನುಂಟು ಮಾಡುತ್ತಿದೆ ಎಂದು ಕಿಡಿಕಾರಿದರು.
ಈಶಾನ್ಯ ಪ್ರದೇಶದಲ್ಲಿ ಜನ ಸಾಮಾನ್ಯರ ಮತ್ತು ಸೇನೆಯ ಅಂತರ ಕಡಿತಗೊಳಿಸುವ ಮತ್ತು ಭದ್ರತಾ ಗಡಿಗಳ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತದ ಮೇಲೆ ಚೀನಾ ನೆರವಿನೊಂದಿಗೆ  ಪಾಕಿಸ್ತಾನ ಯೋಜಿತ ಉಪಾಯದೊಂದಿಗೆ ಅಕ್ರಮ ಬಾಂಗ್ಲಾ ವಲಸಿಗರನ್ನು ಭಾರತಕ್ಕೆ ರವಾನೆ ಮಾಡುತ್ತಿದೆ. ಇದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ನಾನು ಗಮನಿಸಿದಂತೆ ಎಐಯುಡಿಎಫ್ ಎಂಬ ಸಂಘಟನೆ  1980ರಲ್ಲಿ ಬಿಜೆಪಿ ಬೆಳೆದ ವೇಗಕ್ಕಿಂತಲೂ  ಹೆಚ್ಚು ವೇಗವಾಗಿ ಬೆಳೆಯುತ್ತಿದೆ. 
ನನ್ನ ಅಭಿಪ್ರಾಯದಂತೆ ಈಶಾನ್ಯ ವಲಯದ ನೆರೆ ದೇಶ ತುಂಬಾ ಚಾಣಾಕ್ಷವಾಗಿ ಗೇಮ್ ಪ್ಲೇ ಮಾಡುತ್ತಿದ್ದು, ಗಡಿಯನ್ನು ಸದಾ ಕಾಲ ಅಶಾಂತಿಯಿಂದ ಇರಿಸಲು ಸದಾ ಪ್ರಯತ್ನಿಸುತ್ತಿದ್ದು, ಅಕ್ರಮ ವಲಸಿಗರನ್ನು ಚಾಣಾಕ್ಷವಾಗಿ  ದೇಶದೊಳಗೆ ನುಗ್ಗಿಸಿ ಗಡಿ ಅಶಾಂತಿಗೆ ಕಾರಣವಾಗುತ್ತಿದೆ. ಈಶಾನ್ಯ ಗಡಿಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ರಾಜ್ಯದಲ್ಲಿ ಹೊರಗಿನವರು ಅಕ್ರಮವಾಗಿ ನೆಲೆಸಿದ್ದಾರೆ. ಎಐಯುಡಿಎಫ್  ಎಂಬ ಪಕ್ಷ ಅಥವಾ ಸಂಘಟನೆ ಇಂತಹ ಅಕ್ರಮ ವಲಸಿಗರ ನೆರವಿಗೆ ನಿಂತಿದ್ದು, ಈ ಪಕ್ಷದ ಕುರಿತು ನೀವು ಸೂಕ್ಷ್ಮವಾಗಿ ಗಮನಿಸಿದರೆ, 1980ರಲ್ಲಿ ಬಿಜೆಪಿ ಬೆಳೆದ ವೇಗಕ್ಕಿಂತಲೂ ಈ ಪಕ್ಷ ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎಂದು  ಬಿಪಿನ್ ರಾವತ್ ಹೇಳಿದ್ದಾರೆ.
ರಾಜಕೀಯ ದುರುದ್ದೇಶ ಪೂರಿತ ಹೇಳಿಕೆ ಎಂದ ಅಸ್ಸಾಂ ಮೂಲದ ಸಂಘಟನೆ
ಇನ್ನು ಬಿಪಿನ್ ರಾವತ್ ಅವರ ಹೇಳಿಕೆ ಬಹಿರಂಗವಾಗುತ್ತಿದ್ದಂತೆಯೇ ರಾವತ್ ಹೇಳಿಕೆ ಕಿಡಿಕಾರಿರುವ ಎಐಯುಡಿಎಫ್, ಇದೊಂದು ರಾಜಕೀಯ ದುರುದ್ದೇಶ ಪೂರಿತ ಹೇಳಿಕೆಯಾಗಿದೆ ಎಂದು ಹೇಳಿದೆ. ಅಲ್ಲದೆ ರಾಜ್ಯದಲ್ಲಿ ಇತರೆ  ಪಕ್ಷಗಳ ದುರಾಡಳಿತದಿಂದ ಜನ ರೋಸಿ ಹೋಗಿದ್ದು, ಖಂಡಿತ ನಮ್ಮ ಪಕ್ಷ ಅಧಿಕಾರಕ್ಕೇರಲಿದೆ ಎಂದು ಎಐಯುಡಿಎಫ್ ಹೇಳಿದೆ.
SCROLL FOR NEXT