ದೇಶ

ರಾವತ್ ಹೇಳಿಕೆಯಲ್ಲಿ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ: ಸೇನೆ

Lingaraj Badiger
ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಬೆಂಬಲಕ್ಕೆ ನಿಂತಿರುವ ಭಾರತೀಯ ಸೇನೆ, ರಾವತ್ ಹೇಳಿಕೆಯಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದೆ.
ಬಿಜೆಪಿಗಿಂತಲೂ ಅಸ್ಸಾಂ ರಾಜಕೀಯ ಪಕ್ಷ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ ಎಂಬ ರಾವತ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸೇನೆ ಸಮರ್ಥಿಸಿಕೊಂಡಿದೆ.
ಅಸ್ಸಾಂ ಕೆಲ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯಾಬಲ ಗಣನೀಯ ಪ್ರಮಾಣದಲ್ಲಿ ಏರಿಕೆಗುತ್ತಿದೆ ಎಂಬ ವರದಿಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಬಿಪಿನ್ ರಾವತ್ ಅವರು, ಪಾಕಿಸ್ತಾನ ಚೀನಾದೇಶದ ನೆರವನೊಂದಿಗೆ  ಭಾರತ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಇದಕ್ಕೆ ಬಾಂಗ್ಲಾ ಗಡಿಯಲ್ಲಿರುವ ಅಸ್ಸಾಂಗೆ ಅಕ್ರಮ ಬಾಂಗ್ಲಾದೇಶೀಯರನ್ನು ರವಾನೆ ಮಾಡಿ ಈ ಪ್ರಾಂತ್ಯದ ಅಶಾಂತಿಯನ್ನುಂಟು ಮಾಡುತ್ತಿದೆ ಎಂದು ಕಿಡಿಕಾರಿದರು.
ಈಶಾನ್ಯ ಪ್ರದೇಶದಲ್ಲಿ ಜನ ಸಾಮಾನ್ಯರ ಮತ್ತು ಸೇನೆಯ ಅಂತರ ಕಡಿತಗೊಳಿಸುವ ಮತ್ತು ಭದ್ರತಾ ಗಡಿಗಳ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತದ ಮೇಲೆ ಚೀನಾ ನೆರವಿನೊಂದಿಗೆ  ಪಾಕಿಸ್ತಾನ ಯೋಜಿತ ಉಪಾಯದೊಂದಿಗೆ ಅಕ್ರಮ ಬಾಂಗ್ಲಾ ವಲಸಿಗರನ್ನು ಭಾರತಕ್ಕೆ ರವಾನೆ ಮಾಡುತ್ತಿದೆ. ಇದರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ನಾನು ಗಮನಿಸಿದಂತೆ ಎಐಯುಡಿಎಫ್, ಬಿಜೆಪಿ ಬೆಳೆದ ವೇಗಕ್ಕಿಂತಲೂ  ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎಂದಿದ್ದರು.
SCROLL FOR NEXT