ನವದೆಹಲಿ: ಕೆನಡಿಯನ್ ವಿದೇಶಾಂಗ ಸಚಿವ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಸುಷ್ಮಾ ಸ್ವರಾಜ್ ಭೇಟಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ
ನವದೆಹಲಿ: ಶುಕ್ರವಾರದ ಭಾರತ ಹಾಗೂ ಕೆನಡಾ ದ್ವಿಪಕ್ಷೀಯ ಶೃಂಗಸಭೆಗೆ ಮುಂಚಿತವಾಗಿ ಇಂದು ಬಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೆನಡಾ ವಿದೇಶಾಂಗ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಪರಸ್ಪರ ದ್ವಿಪಕ್ಷೀಯ ಸಹಕಾರ ಸೇರಿದಂತೆ ಅನೇಕ ವಿಚಾರಗಳ ಬಗೆಗೆ ಮಾತುಕತೆ ನಡೆಸಿದ್ದಾರೆ.
ವ್ಯಾಪಾರ ಹಾಗೂ ಹೂಡಿಕೆ. ಭದ್ರತೆ, ಸೈಬರ್ ಭದ್ರತೆ, ಶಕ್ತಿಯ ಮೂಲಗಳು, ಜನ ಸಂಪರ್ಕ ಹಾಗೂ ಇನ್ನಿತರೆ ಪ್ರಾದೇಶಿಕ ಸಮಸ್ಯೆಗಳ ವಿಚಾರವಾಗಿ ಮಾತನಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರುಡಿಯು.ಶೃಂಗಸಭೆಗೆ ಮುನ್ನ ಕೆನಡಾ ವಿದೇಶಾಂಗ ಸಚಿವರು ಸುಷ್ಮಾ ಅವರನ್ನು ಭೇಟಿಯಾಗಿದ್ದಾರೆ.
ಫೆ.17ರಿಂದ ಎಂಟು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿಗಳು ಹಾಗೂ ನಿಯೋಗ ಇಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.
ಪ್ರತ್ಯೇಕ ಖಲಿಸ್ಥಾನ ಬೇಡಿಕೆಗೆ ಕೆನಡಾ ಸರ್ಕಾರ ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆ ನಿಡುತ್ತಿರುವ ಹಿನ್ನೆಲೆಯಲ್ಲಿ ಬಾರತ ಹಾಗೂ ಕೆನಡಾ ನಡುವಿನ ಸಂಬಂಧ ಹಿಂದಿನಷ್ಟು ಉತ್ತಮವಾಗಿರಲಿಲ್ಲ.
ಜಸ್ಟಿನ್ ಟ್ರುಡಿಯು ಕಳೆದ ಕೆಲ ದಿನಗಳಿಂದ ಆಗ್ರಾ, ಅಹಮದಾಬಾದ್, ಅಮೃತಸರ ಸೇರಿ ನಾನಾ ಕಡೆ ಭೇಟಿ ನಿಡುತ್ತಿದ್ದು ಪ್ರಧಾನಿ ಮೋದಿ ಇನ್ನೂ ಅಧಿಕೃತ ಸ್ವಾಗತ ಹೇಳಿಕೆ ಅಥವಾ ಟ್ವೀಟ್ ಮಾಡಿಲ್ಲ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics