ಅಧಿಕಾರಿಗಳು ಜಪ್ತಿ ಮಾಡಿರುವ ದುಬಾರಿ ವಾಚುಗಳು
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸಗಳ ಮೇಲೆ ಈ ಹಿಂದೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ ದುಬಾರಿ ವಾಚುಗಳು, ಅತ್ಯಮೂಲ್ಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಹಿಂದೆ ನಡೆದ ದಾಳಿಯಲ್ಲಿ ನೀರವ್ ಮೋದಿಯ ದುಬಾರಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಇದೀಗ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ದುಬಾರಿ ವಾಚುಗಳು ಮತ್ತು ವಿದೇಶದಿಂದ ತರಿಸಿಕೊಳ್ಳಲಾಗಿದ್ದ ಅತ್ಯಮೂಲ್ಯ ಗೃಹಾಲಂಕಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಡೆದಿದ್ದ ದಾಳಿಯ ಮುಂದುವರಿದ ಭಾಗ ಇದಾಗಿದ್ದು, ಈ ವೇಳೆ ಸುಮಾರು 44 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದಾಳಿ ವೇಳೆ ಅಧಿಕಾರಿಗಳಿಗೆ 30 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳ ದಾಖಲೆಗಳು, 13.86 ಕೋಟಿ ಮೌಲ್ಯ ಷೇರುಪತ್ರಗಳು ದೊರೆತಿದೆ. ಅಲ್ಲದೆ 176 ಉಕ್ಕಿನ ಅಲ್ಮೇರಾಗಳು, ದೊರೆತಿದ್ದು, ಸುಮಾರು 60 ಬಾಕ್ಸ್ ಗಳಲ್ಲಿ ತುಂಬಿದ್ದ ದುಬಾರಿ ವಾಚುಗಳನ್ನು ಅಧಿಕಾರಿರಗಳು ಜಪ್ತಿ ಮಾಡಿದ್ದಾರೆ. ಒಟ್ಟಾರೆ ಈ ದಾಳಿಯಲ್ಲಿ ಅಧಿಕಾರಿಗಳು ಸುಮಾರು 44 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹಿಂದೆ ಅಧಿಕಾರಿಗಳು ಪಾರ್ಷ್, ರೋಲ್ಸ್ ರಾಯ್ಸ್ ಘೋಸ್ಟ್ ಸೇರಿದಂತೆ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ದುಬಾರಿ ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics