ನವದೆಹಲಿ: ಸುಂಜ್ವಾನಾ ಸೇನಾ ನೆಲೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ರಾಷ್ಚ್ರೀಯ ತನಿಖಾ ದಳ ಗುರುವಾರ ಪ್ರಕರಣ ದಾಖಲಿಸಿದೆ.
ಸೆಕ್ಷನ್ 120 ಬಿ, 121, 302, ಮತ್ತು 307ರ ಅಡಿಯಲ್ಲಿ ಹಾಗೂ ಸೆಕ್ಷನ್ 7 ಮತ್ತು 27 ಹಾಗೂ 1967ರ ಶಸ್ತ್ರಾಸ್ತ್ರ ಕಾಯಿದೆಯ 16 ಮತ್ತು 18ನೇಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ,
ಫೆಬ್ರವರಿ 10ರಂದು ಜಮ್ಮು ಪ್ರದೇಶದ ಸುಂಜ್ವಾನಾ ಸೇನಾ ನೆಲೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಒರ್ವ ನಾಗರಿಕ ಸೇರಿದಂತೆ 10 ಮಂದಿ ಸೈನಿಕರು ಸಾವನ್ನಪ್ಪಿದರು.