ದೇಶ

ಓರಿಯಂಟಲ್ ಬಳಿಕ ಮಹಾರಾಷ್ಟ್ರ ಬ್ಯಾಂಕ್ ಸರದಿ; ದೆಹಲಿ ಉದ್ಯಮಿ ವಿರುದ್ಧ ವಂಚನೆ ಪ್ರಕರಣ

Srinivasamurthy VN
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಬಯಲಿಗೆ ಬಂದ ಬಳಿಕ ಸರಣಿ ಬ್ಯಾಂಕ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಈ ಪಟ್ಟಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ಸೇರ್ಪಡೆಯಾಗಿದೆ.
ದೆಹಲಿ ಮೂಲದ ಉದ್ಯಮಿ ಅಮಿತ್ ಸಿಂಗ್ಲಾ ಅವರು ಬ್ಯಾಂಕ್ ಗೆ ಸುಮಾರು 18 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಿದೆ. ದೆಹಲಿ ಮೂಲದ ಉದ್ಯಮಿ ಅಮಿತ್ ಸಿಂಗ್ಲಾ ಅವರು, ತಮ್ಮಆಶಿರ್ವಾದ್ ಸಂಸ್ಥೆಯ ಮೂಲಕ ಬ್ಯಾಂಕ್ ಸುಮಾರು 18 ಕೋಟಿ ರೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಹಗಿದೆ. ಎಫ್ ಐಆರ್ ಮಾಹಿತಿ ಅನ್ವಯ 2010 ಅಕ್ಟೋಬರ್ 27ರಂದು 350 ಲಕ್ಷ ರೂ ಬಿಡುಗಡೆ ಮಾಡಲಾಗಿದ್ದು, ಬಳಿಕ 2011ರ ಸೆಪ್ಟೆಂಬರ್ ರಂದು 550 ಲಕ್ಷ ರೂ ಮತ್ತು 2012ರ ಆಗಸ್ಟ್ 22ರಂದು 950 ಲಕ್ಷ ರೂಗಳನ್ನು ಪಡೆಯಲಾಗಿತ್ತು. 
ಇದೀಗ ಈ ಸಾಲಗಳಿಗೆ ಸಂಸ್ಥೆ ನೀಡಲಾಗಿದ್ದ ಪ್ರಮಾಣ ಪತ್ರಗಳು ಅಧಿಕೃತವಲ್ಲ ಮತ್ತು ಅಕ್ರಮ ಎಂದು ಹೇಳಲಾಗಿದೆ. ಅಂತೆಯೇ ಸಾಲ ಪಡೆಯುವುದಕ್ಕಾಗಿ ಅಕ್ರಮ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಅಂತೆಯೇ ಅರ್ಜಿಯೊಂಜದಿಗೆ ಲಗತ್ತಿಸಲಾಗಿದ್ದ ವಿದೇಶ ಪ್ರಮಾಣ ಪತ್ರ ಕೂಡ ನಕಲಿ ಎಂದು ಇದರಿಂದ ಸಾಬೀತಾಗಿದೆ ಎನ್ನಲಾಗಿದೆ. ಹೀಗಾಗಿ ಇದೀಗ ಸಂಸ್ಥೆ ವಿರುದ್ದ ಬ್ಯಾಂಕ್ ಆಫ್ ಬರೋಡಾ ಎಫ್ ಐಆರ್ ದಾಖಲು ಮಾಡಿದ್ದು, ಆಶೀರ್ವಾದ್ ಸಂಸ್ಥೆ ಮಾಲೀಕ ಅಮಿತ್ ಸಿಂಗ್ಲಾ, ಸಿಂಗ್ಲಾ ಅವರ ತಂದೆ ರೋಷನ್ ಲಾಲ್, ತಾಯಿ ಸುಮಿತ್ರಾ ದೇವಿ ಮತ್ತು ಆಶೀರ್ವಾದ್ ಸಂಸ್ಥೆಯ ಸಹೋಗರ ಸಂಸ್ಥೆಗಳಾದ ಟೆಕ್ ಮ್ಯಾಕ್ ಇಂಟರ್ ನ್ಯಾಷನಲ್ ವಿರುದ್ಘವೂ ಎಫ್ ಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆಯಷ್ಟೇ ದ್ವಾರಕಾನಾಥ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಂಸ್ಥೆಯಿಂದ 389.85 ಕೋಟಿ ಸಾಲ ಪಡೆದು ಅದನ್ನು ತೀರಿಸದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಸಿಬಿಐ ಮೂಲಗಳು ತಿಳಿಸಿರುವಂತೆ ಸಂಸ್ಥೆಯ ಸಭ್ಯಾ ಸೇಟ್, ರೀಟಾ ಸೇಟ್, ಕೃಷ್ಣ ಕುಮಾರ್ ಸಿಂಗ್, ರವಿಸಿಂಗ್ ಮತ್ತು ಸಂಸ್ಥೆಯ ಎಲ್ಲ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
SCROLL FOR NEXT