ಸಂಗ್ರಹ ಚಿತ್ರ 
ದೇಶ

ಸಂಸ್ಥೆಯ ಸಿಬ್ಬಂದಿಗಳ ವೇತನ ಪಾವತಿ ಅಸಾಧ್ಯ: ಮೆಹುಲ್ ಚೋಕ್ಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಖ್ಯಾತ ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಖ್ಯಾತ ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತನ್ನ ಸಿಬ್ಬಂದಿಗಳಿಗೆ ಬರೆದಿರುವ ಪತ್ರದಲ್ಲಿ ಮೆಹುಲ್ ಚೋಕ್ಸಿ, ತಾನು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇನೆ. ನನ್ನ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವುಗಳೆಲ್ಲೂ ವಿಚಾರಣೆ ಹಂತದಲ್ಲಿದೆ. ವಿವಿಧ ತನಿಖಾ ಸಂಸ್ಥೆಗಳು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ನನ್ನ ಆತ್ಮಸಾಕ್ಷಿಗೆ ಗೊತ್ತು ನಾನು ಏನೂ ತಪ್ಪು ಮಾಡಿಲ್ಲ ಎಂದು. ಕೊನೆಗೆ ಸತ್ಯಾಂಶ ಹೊರಗೆ ಬರುವ ವಿಶ್ವಾಸವಿದೆ. ಹೀಗಾಗಿ ಪ್ರಸ್ತುತ ಸಿಬ್ಬಂದಿಗಳ ಬಾಕಿ ವೇತನ ಸಾಧ್ಯವಿಲ್ಲ ಎಂದು ಮೆಹುಲ್ ಚೋಕ್ಸಿ ಹೇಳಿದ್ದಾರೆ.
ಅಂತೆಯೇ ತಮ್ಮ ಸಂಸ್ಥೆಯ ಗ್ರಾಹಕರು ಮತ್ತು ಸಿಬ್ಬಂದಿಗಳಲ್ಲಿ ಗೊಂದಲ ಉಂಟು ಮಾಡಲು ತನಿಖಾ ಸಂಸ್ಥೆಗಳು ಯತ್ನಿಸುತ್ತಿವೆ ಎಂದು ಚೋಕ್ಸಿ ಆರೋಪಿಸಿದ್ದಾರೆ. ಇದೇ ವೇಳೆ ಸಂಸ್ಥೆಯ ವತಿಯಿಂದ ಸಿಬ್ಬಂದಿಗಳಿಗೆ ನೀಡಲಾಗಿರುವ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳನ್ನು ಬಾಕಿ ವೇತನ ಪಾವತಿ ಮಾಡುವವರೆಗೂ ತಮ್ಮ ತಮ್ಮ ಬಳಿಯಲ್ಲೇ ಇಟ್ಟುಕೊಳ್ಳುವಂತೆ ಚೋಕ್ಸಿ ಮನವಿ ಮಾಡಿಕೊಂಡಿದ್ದಾರೆ.
ತನ್ನ ಸುಮಾರು 3500 ಸಿಬ್ಬಂದಿಗಳಿಗೆ ಮೆಹುಲ್ ಚೋಕ್ಸಿ ಬರೆದಿರುವ ಪತ್ರವನ್ನು ಚೋಕ್ಸಿ ಪರ ವಕೀಲ ಸಂಜಯ್ಅಬಾಟ್ ಬಿಡುಗಡೆ ಮಾಡಿದ್ದು, ಈ ವೇಳೆ ಮಾತನಾಡಿದ ಅಬಾಟ್ ಆಂತರಿಕ ಸಿಬ್ಬಂದಿಗಳಿಗೆ ಬರೆಯಲಾಗಿರುವ ಪತ್ರ ಇತರೆ ಸಿಬ್ಬಂದಿಗಳಿಗೆ ಹೇಗೆ ದೊರೆಯಿತು ಎಂಬುದು ತಿಳಿದಿಲ್ಲ. ಸಂಸ್ಥೆಯ ಸರ್ವರ್ ಗಳು ತನಿಖಾಧಿಕಾರಿಗಳ ವಶದಲ್ಲಿದ್ದು, ಹೀಗಿದ್ದೂ ಪತ್ರ ಸಿಬ್ಬಂದಿಗಳ ತಲುಪಿದ್ದು ಹೇಗೆ ಎಂದು ಆಬಾಟ್ ಶಂಕೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್