ನೀರವ್ ಮೋದಿಯ ಚಿತ್ರ 
ದೇಶ

ಬ್ಯಾಂಕ್ ವಂಚನೆ ಹಗರಣ: 16 ಬ್ಯಾಂಕುಗಳಿಂದ ಸಾಲ ಪಡೆದಿದ್ದ ನೀರವ್ ಮೋದಿ,ಮೆಹುಲ್ ಚೋಕ್ಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆಭರಣ ಉದ್ಯಮಿ ನೀರವ್ ಮೋದಿ ,ಮೆಹುಲ್ ಚೋಕ್ಸಿಯ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಿದೆ.

ದೆಹಲಿ: ಪಂಜಾಬ್ ನ್ಯಾಷನಲ್  ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆಭರಣ ಉದ್ಯಮಿ ನೀರವ್ ಮೋದಿ ,ಮೆಹುಲ್ ಚೋಕ್ಸಿಯ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಿದೆ.

 ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲದೇ ಇತರ 16 ಬ್ಯಾಂಕುಗಳಲ್ಲಿ ಇವರಿಬ್ಬರು  ಸಾಲ ಪಡೆದಿದ್ದು, ಬ್ಯಾಂಕುಗಳಿಗೆ ಸುಮಾರು 20 ಸಾವಿರ ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಇಡಿ ಹೇಳಿದೆ.

ಈ ಸಂಬಂಧ ಇಡಿ ನಿರ್ದೇಶಕ ಕರ್ನಾಲ್ ಸಿಂಗ್ ಬ್ಯಾಂಕುಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಸಾಲದ ಬಗ್ಗೆ ಮಾತ್ರ ಮಾಹಿತಿ
ಪಡೆಯಲಾಗುತ್ತಿದೆ ಆದರೆ, ದೂರು ಸಲ್ಲಿಸುವಂತೆ ಬ್ಯಾಂಕುಗಳಿಗೆ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.

16 ಬ್ಯಾಂಕುಗಳಲ್ಲಿ 5 ಸಾವಿರದಿಂದ 10 ಸಾವಿರ ಕೋಟಿ ರೂ. ನಷ್ಟು ನೀರವ್ ಮೋದಿ, ಮೆಹುಲ್ ಚೋಕ್ಸಿ ಸಾಲ ಪಡೆದಿರುವ ಸಾಧ್ಯತೆಯಿದ್ದು,
ಈ ನಿಟ್ಟಿನಲ್ಲಿ ಸಿಬಿಐ ಹಾಗೂ ಇಡಿ ತನಿಖೆ ಕೈಗೊಂಡಿವೆ.

ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಬೇಗನೆ ಹಿಂದಿರುಗಿಸುವಂತೆ ಆರೋಪಿಗಳಿಗೆ ಸರ್ಕಾರ ತಿಳಿಸಿದೆ. ಅಲ್ಲದೇ ನೀರವ್ ಮೋದಿ ಪಾಸ್ ಪೋರ್ಟ್ ನ್ನು ಅಮಾನತುಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ