ರಾಮ್‍ದೇವ್ ಮಿಶ್ರಾ 
ದೇಶ

ಉತ್ತರ ಪ್ರದೇಶ: ಕೊಡಲಿಯಿಂದ ತಂದೆಯ ಕತ್ತು ಸೀಳಿದ ಮಗ ಬಳಿಕ ಫೆವಿಕ್ವಿಕ್ ಬಳಸಿ ಅಂಟಿಸಲು ನೋಡಿದ!

ತಂದೆಯ ಕತ್ತಿಗೆ ಕೊಡಲಿಯಿಂದ ಹಲ್ಲೆ ನಡೆಸಿದ ಮಗನೊಬ್ಬ ಬಳಿಕ ಭಯಭೀತಿಯಿಂದ ಕಡಿದ ಭಾಗವನ್ನು ಫೆವಿಕ್ವಿಕ್ ಬಳಸಿ ಅಂಟಿಸಲು ಮುಂದಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಸ್ತಿ(ಉತ್ತರ ಪ್ರದೇಶ): ತಂದೆಯ ಕತ್ತಿಗೆ ಕೊಡಲಿಯಿಂದ ಹಲ್ಲೆ ನಡೆಸಿದ ಮಗನೊಬ್ಬ ಬಳಿಕ ಭಯಭೀತಿಯಿಂದ ಕಡಿದ ಭಾಗವನ್ನು ಫೆವಿಕ್ವಿಕ್ ಬಳಸಿ ಅಂಟಿಸಲು ಮುಂದಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಜಗದೀಶ್ ಮಿಶ್ರಾ ತನ್ನ ತಂದೆ ರಾಮ್‍ದೇವ್ ಮಿಶ್ರಾ ಅವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಶನಿವಾರ ನಡೆದ ಘಟನೆಯಲ್ಲಿ ತಂದೆಗೆ ಕೊಡಲಿಯಿಂದ ಹೊಡೆದ ಒಂದೇ ಏಟಿಗೆ ತಂದೆ ಮೃತನಾದನೆಂದು ತಿಳಿದ ಮಗ ಜಗದೀಶ್ ಕೆಲ ಕ್ಷಣಗಳ ಬಳಿಕ ತಂದೆಯ ಚೀರಾಟ ಕೇಳಿ ಭೀತಿಗೊಂಡಿದ್ದಾನೆ. ಆಗ ಮತ್ತೆ ತಾನು ಕೊಟ್ಟ ಏಟಿನಿಂದ ಸೀಳಿದ್ದ ಕುತ್ತಿಗೆ ಭಾಗವನ್ನು ಫೆವಿಕ್ವಿಕ್ ಬಳಸಿ ಅಂಟಿಸುವ ಪ್ರಯತ್ನ ಮಾಡಿದ್ದಾನೆ.
ಉತ್ತರ ಪ್ರದೇಶದ ದರಿಯಾಪುರ ಅರಣ್ಯ ಪ್ರದೇಶದ ಗ್ರಾಮವೊಂದರಲ್ಲಿ ಮಗನೊಡನೆ ವಾಸವಾಗಿದ್ದ ರಾಮ್‍ದೇವ್ ರೈಲ್ವೆ ಇಲಾಖೆಯ ನಿವೃತ್ತ ನೌಕರರಾಗಿದ್ದರು. ವಯೋ ಸಹಜವಾದ ಖಾಯಿಲೆಯಿಂದ ಅಸ್ವಸ್ಥರಾಗಿದ್ದ ಅವರು ಶನಿವಾರದಂದು ಮಂಚದಲ್ಲಿ ಮಲಗಿರುವಾಗಲೇ ಮಲ ವಿಸರ್ಜನೆ ಮಾಡಿದ್ದಾರೆ. ಇದನ್ನು ಕಂಡು ಸಿಟ್ಟಾಗಿದ್ದ ಮಗ ಜಗದೀಶ್ ತಂದೆಯ ಮೇಲೆ ರೇಗಾಡಿದ್ದಾನೆ ಅಲ್ಲದೆ ಅಲ್ಲೇ ಹತ್ತಿರದಲ್ಲಿದ್ದ ಕೊಡಲಿಯಿಂದ ಅವರ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ ಎಂದು ಪೋಲೀಸರು ಹೇಳಿದರು.
ಕೆಲ ಕಾಲದ ಬಳಿಕ ತಂದೆಯ ನರಳುವಿಕೆ ಕೇಳಿ ಗಾಬರಿಯಾಗಿ ಕಡಿದ ಜಾಗಕ್ಕೆ ಫೆವಿಕ್ವಿಕ್ ಹಾಕಿ ಅಂಟಿಸಲು ಮುಂದಾದ ಆರೋಪಿ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರ ಕೂಗಾಟ ನೆರೆಯವರಿಗೆ ಕೇಳಿಸಲಿದೆ ಎನ್ನುವ ಕಾರಣಕ್ಕೆ ಕೋಣೆಯಲ್ಲಿ ಜೋರಾಗಿ ಮ್ಯೂಸಿಕ್ ಸಿಸ್ಟಮ್ ಹಾಕಿಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ತಂದೆಯನ್ನು ಅಲ್ಲಿಯೇ ಬಿಟ್ಟು ತಾನು ಪತ್ನಿಯೊಡನೆ ಪರಾರಿಯಾಗಿದ್ದಾನೆ  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT