ದೇಶ

ಮುಜಾಫರ್ ಪುರ ಅಪಘಾತ: ನಿತೀಶ್ ರತ್ತ ಬೆರಳು ತೋರಿದ ರಾಹುಲ್ ಗಾಂಧಿ

Raghavendra Adiga
ನವದೆಹಲಿ: ಬಿಹಾರ ಮುಜಾಫರ್ ಪುರದಲ್ಲಿ ನಡೆದ ಅಪಘಾತಕ್ಕೆ  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಣೆ ಎಂದು ರಾಹುಲ್ ಹೇಳಿದ್ದಾರೆ.
"ಮದ್ಯ ನಿಷೇಧವಾಗಿರುವ ಬಿಹಾರದಲ್ಲಿ ಮದ್ಯ ಸೇವಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕರು ಒಂಭತ್ತು ಮುಗ್ದ ಮಕ್ಕಳ ಹತ್ಯೆಗೆ ಕಾರಣರಾಗಿದ್ದಾರೆ! ನಿತೀಶ್ ಜೀ, ಇದು ನಿಮ್ಮ ಮದ್ಯ ನಿಷೇಧ ಕ್ರಮದ ಲಕ್ಷಣವೆ?ನಿಮ್ಮ ಆತ್ಮಸಾಕ್ಷಿ ಯಾರನ್ನು ಬೆಂಬಲಿಸಿದೆ, ಬಿಹಾರದ ಮದ್ಯ ನಿಷೇಧ ಕ್ರಮದ ವಾಸ್ತವತೆಯನ್ನೋ ಅಥವಾ ಬಿಜೆಪಿಯ ನಾಯಕನನ್ನೊ?" ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದೇ ಶನಿವಾರದಂದು ಮುಜಾಫರ್ ಪುರದ ಅಹಿಯಾಪುರ್ ಎನ್ನುವಲ್ಲಿ ಕಾರೊಂದು ಸರ್ಕಾರಿ ಶಾಲಾ ಕಟ್ಟಡಕ್ಕೆ ಗುದ್ದಿದ ಪರಿಣಾಮ ಒಂಭತ್ತು ಮಕ್ಕಳು ಸತ್ತು 24 ಮಂದಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಬಳಿಕ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಅಪಘಾತಕ್ಕೆ ಕಾರಣವಾದ ಕಾರು ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಸೇರಿದೆ ಎಂದು ಆರೋಪಿಸಿದ್ದರು.
ಇದೇ ವೇಳೆ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ. 
ಅಪಘಾತಕ್ಕೆ ಕಾರಣವಾದ ಕಾರು ಚಾಲಕನನ್ನು ಗುರುತಿಸಲಾಗಿದೆ ಎಂದು ಬಿಹಾರದ ಪೋಲೀಸರು ಸೋಮವಾರ ತಿಳಿಸಿದ್ದು ಕಾರು ಬಿಜೆಪಿ ನಾಯಕರಿಗೆ ಸೇರಿದ್ದೆ ಎನ್ನುವ ಕುರಿತಂತೆ ಸ್ಪಷ್ಟಪಡಿಸಿಲ್ಲ.
SCROLL FOR NEXT