ವೃಂದಾವರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ವೃಂದಾವನದ ವಿಧವೆಯರು ದೆಹಲಿಗೆ ತೆರಳುತ್ತಿದ್ದಾರೆ.
ಪ್ರಧಾನಿ ಮೋದಿಯವರೊಂದಿಗೆ ಹೋಳಿ ಆಚರಿಸುವುದಕ್ಕೂ ಮುನ್ನ ನಿನ್ನೆಯಷ್ಟೇ ಐತಿಹಾಸಿಕ ಗೋಪಿನಾಥ್ ದೇವಾಲಯದಲ್ಲಿ ವೃಂದಾವನದ ವಿಧವೆಯರೆಲ್ಲರೂ ಹೋಳಿ ಹಬ್ಬವನ್ನು ಆಚರಿಸಿದರು.
ತಮ್ಮ ಸಹೋದರ ಮೋದಿಯವರೊಂದಿಗೆ ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ವೃಂದಾವನ ಆಶ್ರಮದ ಐವರು ವಿಧವೆಯರು 11 ಮಡಿಕೆಯಲ್ಲಿಗಳಲ್ಲಿ ಗಲಾಲ್ ಮತ್ತು ಸಿಹಿತಿಂಡಿಗಳನ್ನು ಹೊತ್ತೊಯ್ಯುತ್ತಿದ್ದಾರೆ.
ಪ್ರಧಾನಮಂತ್ರಿಗಳೊಂದಿಗೆ ನಾವು ಹೋಳಿ ಹಬ್ಬವನ್ನು ಆಚರಿಸುವ ಅವಕಾಶ ದೊರಕುತ್ತದೆ ಎಂದು ಎಂದಿಗೂ ತಿಳಿದಿರಲಿಲ್ಲ. ಎಂದು ವಿಧವೆಯಾಗಿರುವ ಛಬ್ಬಿ ಶರ್ಮಾ ಎಂಬುವವರು ಹೇಳಿದ್ದಾರೆ.