ನವದೆಹಲಿ: 1978 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಎ ತೇರ್ಗಡೆಯಾದ ವರ್ಷದ ದಾಖಲೆಗಳನ್ನು ಆರ್ ಟಿಐ ಅಡಿ ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ದೆಹಲಿ ವಿಶ್ವ ವಿದ್ಯಾನಿಲಯ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
ಕೇಂದ್ರ ಮಾಹಿತಿ ಆಯೋಗದ ನಿರ್ದೇಶನ ಪ್ರಶ್ನಿಸಿ ವಿಶ್ವ ವಿದ್ಯಾನಿಲಯ ಪ್ರಮಾಣ ಪತ್ರವನ್ನು ಕೋರ್ಟ್ ಗೆ ಸಲ್ಲಿಸಿತ್ತು. 1978 ರಲ್ಲಿ ಬಿಎ ಪರೀಕ್ಷೆಯ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡುವಂತೆ ಹೇಳಿತ್ತು.
1978 ರಲ್ಲಿ ಡಿಗ್ರಿ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸಲು ಅವಕಾಶ ನೀಡುವಂತೆ ಸಿಐಸಿ ಕೋರಿತ್ತು, ಈ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪರೀಕ್ಷೆ ಬರೆದಿದ್ದರು.
ವಿವಿಯ ದಾಖಲೆಗಳನ್ನು ಮೂರನೇ ವ್ಯಕ್ತಿಗೆ ಬಹಿರಂಗ ಪಡಿಸಬೇಕೆಂದು ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದರು.ವಿವಿಯ ಮಾಹಿತಿಗಳನ್ನು ಮಾಹಿತಿ ಹಕ್ಕು ಆಯೋಗದಡಿ ಬಹಿರಂಗ ಪಡಿಸದಂತೆ ದೆಹಲಿ ವಿವಿಗೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ಫಲಿತಾಂಶದ ವಿವರಗಳನ್ನು ಬಹಿರಂಗ ಪಡಿಸುವುದರಿಂದ ವ್ಯಕ್ತಿಯು ಸಾರ್ವಜನಿಕವಾಗಿ ಮುಜುಗರ ಉಂಟು ಮಾಡುತ್ತದೆ, ಹೀಗಾಗಿ ಅವರ ವಯಕ್ತಿಕ ಹಾಗೂ ದಿನನಿತ್ಯದ ಜೀವನಕ್ಕೆ ಅಡಚಣೆ ಉಂಟುಮಾಡುತ್ತದೆ ಎಂದು ವಿವಿ ಹೇಳಿತ್ತು.