ರಾಜಸ್ಥಾನ: ಚಲಿಸುತ್ತಿದ್ದ ರೈಲಿನಿಂದ ಹಾರಿದ್ದ ಡಚ್ ಪ್ರವಾಸಿಗ ಸಾವು 
ದೇಶ

ರಾಜಸ್ಥಾನ: ಚಲಿಸುತ್ತಿದ್ದ ರೈಲಿನಿಂದ ಹಾರಿದ್ದ ಡಚ್ ಪ್ರವಾಸಿಗ ಸಾವು

ತಾನು ತಪ್ಪಾದ ರೈಲನ್ನೇರಿದ್ದೇನೆ ಎಂದು ಅರಿತ ಡಚ್ ಪ್ರವಾಸಿಗನೊಬ್ಬ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮೃತಪಟ್ಟಿದ್ದಾನೆ.

ಸವಾಯಿ ಮಧೋಪುರ್(ರಾಜಸ್ಥಾನ): ತಾನು ತಪ್ಪಾದ ರೈಲನ್ನೇರಿದ್ದೇನೆ ಎಂದು ಅರಿತ ಡಚ್ ಪ್ರವಾಸಿಗನೊಬ್ಬ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ನೆದರ್ಲ್ಯಾಂಡ್ ಮೂಲದ ಎರಿಕ್ ಜೊಹಾನ್ನೆ (54) ಎಂದು ಗುರುತಿಸಲಾಗಿದೆ. ಆತನು ಬ್ರಿಟನ್ ಮೂಲದ ತನ್ನ ಇನ್ನೋರ್ವ ಸ್ನೇಹಿತನೊಡನೆ ನವದೆಹಲಿಗೆ  ಹೊರಟಿದ್ದ  ಶತಾಬ್ದಿ ಎಕ್ಸ್ ಪ್ರೆಸ್ ಏರಿದ್ದರು. ಆದರೆ ರೈಲು ಪ್ಲಾಟ್ ಪಾರಂ ಬಿತ್ತ ನಂತರ ತಾವು ತಪ್ಪಾದ ರೈಲನ್ನು ಹತ್ತಿದ್ದೇವೆಂದು ಅವರಿಗೆ ತಿಳಿದಿದೆ. ಅದೇ ತಕ್ಷಣ ಇಬ್ಬರೂ  ಚಲಿಸುತ್ತಿದ್ದ ರೈಲಿನಿಂದಲೇ ಕೆಳಗೆ ಜಿಗಿದಿದ್ದಾರೆ.
ಘಟನೆಯಲ್ಲಿ ಎರಿಕ್ ತಲೆಗೆ ಗಂಭೀರ ಗಾಯಗಳಾಗಿತ್ತು. ಆದರೆ ಆತನ ಬ್ರಿಟೀಷ್ ಸ್ನೇಹಿತನಿಗೆ ಯಾವ ಗಾಯಗಳಾಗಿರಲಿಲ್ಲ ಎಂದು ಸವಾಯಿ ಮಾಧೋಪುರ್ ನ ಎಸ್ ಎಚ್ ಓ, ಜಿಆರ್ ಪಿ ಗಿರಿಜಾ ರಾಮ್ ಹೇಳಿದ್ದಾರೆ.
ಇಬ್ಬರು ಪ್ರವಾಸಿಗರು ನಿನ್ನೆ ಸಂಜೆ ಸವಾಯಿ ಮಾಧೋಪುರ್ ಗೆ ಬಂದಿದ್ದರು. ಇಂದು ಇಬ್ಬರೂ ಆಗ್ರಾ ಗೆ ತೆರಳಲು ರೈಲು ಬುಕ್ ಮಾಡಿದ್ದರು. ಆದರೆ ತಾವು ಮೊದಲು ನಿರ್ಧರಿಸಿದ್ದ ರೈಲಿನ ಬದಲು ನವದೆಹಲಿಗೆ ತೆರಳುವ ರೈಲು ಹತ್ತಿದ್ದರು. ಘಟನೆ ಕುರಿತಂತೆ ಪ್ರಕರಣ ದಾಖಲಾಅಗಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆನ್ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಅದ್ಧೂರಿಯಾಗಿ ನಡೆಯಲಿದೆ ಶರ್ಮಿಳಾ ಮಾಂಡ್ರೆ ಮದುವೆ; ದಿನಾಂಕ, ಸ್ಥಳ ಫಿಕ್ಸ್; ಗ್ಲಾಮರಸ್‌ ನಟಿಯ ಮ್ಯಾರೇಜ್ ಎಲ್ಲಿ ಗೊತ್ತಾ?

ನಟ ಪ್ರಕಾಶ್ ರೈಗೆ ಜಾಮೀನು ಮಂಜೂರು; ಬಂಧನ ಭೀತಿಯಿಂದ ಪಾರು!

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!

ರಾಕೆಟ್ ಮರು ಬಳಕೆ: SpaceX ಬಳಿಕ ಇದೀಗ ಹೊಸ ಮೈಲುಗಲ್ಲು ತಲುಪಿದ ಚೀನಾ!