ದೇಶ

ಎನ್ಎಂಸಿ ಮಸೂದೆ ಸದಸ್ಯ ಸಮಿತಿ ಪರಾಮರ್ಶೆಗೆ; ವೈದ್ಯರ ಮುಷ್ಕರ ವಾಪಸ್

Raghavendra Adiga
ನವದೆಹಲಿ:  ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ದೇಶಾದ್ಯಂತ ಹೊರರೋಗಿಗಳ  ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಖಾಸಗಿ ವೈದ್ಯರು ತಮ್ಮ ಮುಷ್ಕರ ಕೈಬಿಟ್ಟಿದ್ದಾರೆ.
ಸರ್ಕಾರವು ಮಸೂದೆಯನ್ನು ಪರಾಮರ್ಶೆಗಾಗಿ ಆಯ್ಕೆ ಸಮಿತಿಗೆ ನೀಡಲು ಒಪ್ಪಿದೆ. ಅಂತೆಯೇ ಭಾರತೀಯ ವೈದ್ಯಕೀಯ ಸಂಘಟನೆಯ ಬೇಡಿಕೆಗಳಿಗೆ ಸಹಮತ ತೋರಿದ ಕಾರಣ ಐಎಂಎ ತನ್ನ ಮುಷ್ಕರದಿಂದ ಹಿಂದೆ ಸರಿದಿದೆ.
"ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ ಮತ್ತು ಆಯ್ದ ಸಮಿತಿಗೆ ಮಸೂದೆಯನ್ನು ಕಳುಹಿಸಿದೆ ಹೀಗಾಗಿ ನಾವು ಕರೆ ನೀಡಿದ್ದ 12 ಗಂಟೆಗಳ ಮುಷ್ಕರವನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ " ಕೆ.ಕೆ. ಅಗರ್ವಾಲ್, ಐಎಂಎ ಮಾಜಿ ಅಧ್ಯಕ್ಷರು ಐಎ ಎನ್ ಎಸ್ ಗೆ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘಟನೆ (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಖಾಸಗಿ ವೈದ್ಯರು ಪ್ರತಿಭಟನೆಗೆ ಇಳಿದಿದ್ದರು.
SCROLL FOR NEXT