ಮಧ್ಯ ಪ್ರದೇಶ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ
ಬೇತುಲ್ (ಮಧ್ಯಪ್ರದೇಶ): ಇಬ್ಬರು ಪುರುಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಪಾಥರ್ ಗ್ರಾಮದವರಾದ ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
19 ವರ್ಷದವರಾದ ಈಕೆ ಆತ್ಮಹತ್ಯೆಗೆ ಮುನ್ನ ಪತ್ರವನ್ನು ಬರೆದಿಟ್ಟಿದ್ದು ಆಕೆ ಬಹಿರ್ದೆಸೆಗೆ ತೆರಳಿದ್ದಾಗ ಇಬ್ಬರು ಪುರುಷರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಬಲರಾಮ್ ಧರ್ವೆ ಹಾಗೂ ರಾಜೇಶ್ ಕಕೋಡಿಯಾ ಅವರುಗಳನ್ನು ಪೋಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. "ನಾವೀಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದು ತನಿಖೆ ಪ್ರಗತಿಯಲ್ಲಿದೆ" ಎಂದು ಪೋಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.