ಮುಂಬೈ: ಒಳಚರಂಡಿ ಕಾಮಗಾರಿ ವೇಳೆ ಸಂಭವಿಸಿದ ಜೆಸಿಬಿ ದುರಂತದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ಸಂಭವಿಸಿದೆ.
ಮುಂಬೈನ ಹೊರವಲಯದ ಪೋವೈ ಪ್ರದೇಶದಲ್ಲಿ ಬಿಎಂಸಿ ವತಿಯಿಂದ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿತ್ತು. ಜೆಸಿಬಿ ಹಾಗೂ ಕ್ರೇನ್ ಗಳು ಕಾಮಗಾರಿಯಲ್ಲಿ ನಿರತವಾಗಿದ್ದವು. ಈ ವೇಳೆ ಜೆಸಿಬಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಅಲ್ಲಿಯೇ ಇದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ಮಿಕರ ಮೇಲೆ ಜೆಸಿಬಿ ಬೀಳುತ್ತಿದ್ದಂತೆಯೇ ವಿಚಾರ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ, ಅಷ್ಟು ಹೊತ್ತಿಗಾಗಲೇ ಮೂವರೂ ಅಸು ನೀಗಿದ್ದರು.
ಮೃತರನ್ನು 48 ವರ್ಷದ ರಾಮನಾಥ್ ಸಿಂಗ್, 47 ವರ್ಷದ ಪೋರತ್ ಸಿಂಗ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ, ಪ್ರಸ್ತುತ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics