ನವದೆಹಲಿ: ತ್ರಿವಳಿ ತಲಾಖ್ ನ್ನು ನಿಷೇಧಿಸುವ ಮಸೂದೆ ಸಂಸತ್ ನಲ್ಲಿ ಮಂಡನೆಯಾಗಿದ್ದು, ಮಸೂದೆಯನ್ನು ತಜ್ಞರ ಸಮಿತಿಗೆ ಕಳಿಸಬೇಕೆಂದು ಸಿಪಿಐ ಹೇಳಿದೆ.
ಸಿಪಿಐ ನಾಯಕ ಡಿ.ರಾಜ ತ್ರಿವಳಿ ತಲಾಖ್ ಮಸೂದೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ಪ್ರಮುಖ ಮಸೂದೆಗಳ ವಿಷಯದಲ್ಲಿ ಸಮಿತಿಗಳನ್ನು ಮೀರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ತ್ರಿವಳಿ ತಲಾಖ್ ಮಸೂದೆಯನ್ನು ತಜ್ಞರ ಸಮಿತಿಗೆ ಕಳಿಸಬೇಕೆಂದು ಸಿಪಿಐ ಆಗ್ರಹಿಸುತ್ತಿದೆ. ಆದರೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಸಮಿತಿ ವ್ಯವಸ್ಥೆಯನ್ನು ಉಲ್ಲಂಘಿಸಿ ಮುನ್ನಡೆಯುತ್ತಿದೆ ಎಂದು ಡಿ.ರಾಜ ಹೇಳಿದ್ದಾರೆ.