ನವದೆಹಲಿ: ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸಲು ಆಥಾರ್ ಕಡ್ದಾಯವಲ್ಲ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ಸಾರಿಗೆ ಸೇವೆಗಳಿಗೆ ಆಧಾರ್ ಅನ್ನು ಉತ್ತೇಜಿಸುವ ಕಾರ್ಯಕ್ಕೆ ರೈಲ್ವೆ ಪ್ರೋತ್ಸಾಹ ನೀಡುತ್ತದೆ.ಎಂದೂ ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ ಹೇಳಿದೆ.
ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಸಂಖ್ಯೆ ಕಡ್ಡಾಯ ಮಾದುವ ಯಾವುದೇ ಪ್ರಸ್ತಾಪವಿಲ್ಲ. ಆದಾಗ್ಯೂ, ಜನವರಿ 1, 2017ರಿಂದ ಹಿರಿಯ ನಾಗರಿಕರಿಗೆ ರಿಯಾಯಿತಿ ರೈಲ್ವೆ ಟಿಕೆಟ್ ಗಳನ್ನು ಬುಕ್ ಮಾಡಲು ಐಚ್ಚಿಕ ಆಧಾರದ ಮೇಲೆ ಆಧಾರ್ ಕಾರ್ಡ್ ಬಳಕೆಯನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ರಾಜೆನ್ ಗೋಹೈನ್ ಸಂಸತ್ತಿನಲ್ಲಿ ಇಂದು ತಿಳಿಸಿದರು.
ಮರಣ ಪ್ರಮಾಣಪತ್ರಕ್ಕೆ ಆಧಾರ್ ಕಾರ್ಡನ್ನು ಕದ್ಡಾಯಗೊಳಿಸಿರುವ ಸರ್ಕಾರದ ಕ್ರಮದ ಕುರಿತು ಹೇಳಿದಾಗ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.