ದೇಶ

ಹರಾಮ್ ಹಣ ಸಂಪಾದಿಸುವ ಬ್ಯಾಂಕ್ ನೌಕರರೊಂದಿಗಿನ ವಿವಾಹಕ್ಕೆ ದಾರೂಲ್ ಉಲೂಮ್ ಫತ್ವಾ!

Srinivas Rao BV
ಬ್ಯಾಂಕಿಂಗ್ ಉದ್ಯೋಗದಿಂದ ಬರುವ ಆದಾಯ ಹರಾಮ್ ಆಗಿದ್ದು ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುವ ನೌಕರರೊಂದಿಗೆ ವಿವಾಹವಾಗದಂತೆ ಇಸ್ಲಾಮಿಕ್ ಸಂಘಟನೆ ದಾರೂಲ್ ಉಲೂಮ್ ಫತ್ವ ಹೊರಡಿಸಿದೆ. 
ಬಡ್ಡಿ ತೆಗೆದುಕೊಳ್ಳುವುದು ಶರಿಯಾ ಕಾನೂನಿನ ಪ್ರಕಾರ ಹರಾಮ್(ಅಕ್ರಮವಾದದ್ದು) ಎಂದು ಪರಿಗಣಿಸಲಾಗಿದ್ದು, ಬ್ಯಾಂಕ್ ಗಳಲ್ಲಿ ಬಡ್ಡಿ ತೆಗೆದುಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ವಿವಾಹ ಪ್ರಸ್ತಾವನೆಗಳನ್ನು ಮುಂದುವರೆಸದಂತೆ ದಾರೂಲ್ ಉಲೂಮ್ ಮುಸ್ಲಿಂ ಕುಟುಂಬಗಳಿಗೆ ಎಚ್ಚರಿಕೆ ವಿಧಿಸಿದೆ. 
ನನಗೆ ಬಂದಿರುವ ವಿವಾಹ ಪ್ರಸ್ತಾವನೆಗಳ ಪೈಕಿ ಕುಟುಂಬದ ಪೋಷಕರು ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಯುವಕನೋರ್ವನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ, ಅಂತಹ ಕುಟುಂಬಗಳು ಹರಾಮ್ ಹಣದಿಂದ ಬೆಳೆದಿರುತ್ತವೆ. ಹರಾಮ್ ಹಣದಿಂದ ಬೆಳೆದ ಕುಟುಂಬದೊಂದಿಗೆ ಮದುವೆ ಪ್ರಸ್ತಾವನೆ ಮುಂದಿಡುವುದು ಸರಿಯಲ್ಲ ಎಂದು ದಾರೂಲ್ ಉಲೂಮ್ ಹೇಳಿದೆ. 
SCROLL FOR NEXT