ದೇಶ

ಬ್ಯಾಂಕರ್'ಗಳನ್ನು ವಿವಾಹವಾಗದಂತೆ ಫತ್ವಾ: ಮುಸ್ಲಿಮರಲ್ಲೇ ಒಡಕು ಎಂದ ಮುಸ್ಲಿಂ ಕಾನೂನು ಮಂಡಳಿ

Manjula VN
ಲಖನೌ: ಬ್ಯಾಂಕ್ ಉದ್ಯೋಗಸ್ಥರನ್ನು ವಿವಾಹವಾಗದಂತೆ ಫತ್ವಾ ಹೊರಡಿಸಿರುವ ಮೌಲ್ವಿ ದಾರೂಲ್ ಉಲೂಮ್ ಡಿಯೋಬಂದ್ ಅವರ ನಿಲುವಿನ ವಿರುದ್ಧ ಇದೀಗ ಮುಸ್ಲಿಂ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. 
ದಾರೂಲ್ ಉಲೂಮ್ ಡಿಯೋಬಂದ್ ಹೊರಡಿಸಿರುವ ಪಥ್ವಾಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ರೀತಿಯ ಫತ್ವಾ ಮುಸ್ಲಿಮರಲ್ಲೇ ಒಡಕನ್ನುಂಟು ಮಾಡುತ್ತದೆ ಎಂದು ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಎಐಎಂಪಿಎಲ್'ಬಿ ಕಾರ್ಯನಿರ್ವಾಹಕ ಅಧ್ಯಕ್ಷ ಖಾಲಿದ್ ರಶೀದ್ ಫಿರಂಗಿ ಮಹಾಲಿಯವರು, ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚು ಜನ ಮುಸ್ಲಿಮರು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ವಿವಾಹವಾಗಬಾರದು ಎಂದು ಫತ್ವಾ ಹೊರಡಿಸಿರುವುದು ತಪ್ಪು ಎಂದು ಹೇಳಿದ್ದಾರೆ. 
ಈ ರೀತಿಯ ಫತ್ವಾ ಹೊರಡಿಸಿರುವವರು ಈ ಕುರಿತು ಮರು ಚಿಂತನೆ ನಡೆಸಬೇಕಿದೆ. ಏಕೆಂದರೆ ಇಂತಹ ಫತ್ವಾ ಮುಸ್ಲಿಂ ಸಮಾಜದಲ್ಲೇ ಗೊಂದಲಗಳನ್ನು ಸೃಷ್ಟಿ ಮಾಡಲಿದೆ. ಇಂತಹ ಫತ್ವಾ ಹೊರಡಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT