ನವದೆಹಲಿ: ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ನೋಟೀಸ್ ಕುರಿತ ಮಾಹಿತಿಯನ್ನು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಗೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಲೋಕಸಭೆಯ ಸದಸ್ಯರಾಗಿರುವ ಕಾರಣ ಅವರ ವಿರುದ್ಧದ ನೋಟೀಸ್ ವಿಚಾರವನ್ನು ಲೋಕಸಭಾಧ್ಯಕ್ಷರು ಪರಿಶೀಲಿಸಬೇಕೆಂದು ನಾಯ್ಡು ಹೇಳಿದ್ದಾರೆ.
ರಾಹುಲ್ ಗಾಂಧಿ, ಕೇಂದ್ರ ಹಣಕಾಸು ಸಚಿವರ ಹೆಸರನ್ನು ತಪ್ಪಾಗಿ ಟ್ವೀಟ್ ಮಾಡಿದ ಕಾರಣ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್ ರಾಹುಲ್ ಅವರಿಗೆ ಕಳೆದ ವಾರ ನೋಟೀಸ್ ಜಾರಿ ಮಾಡಿದ್ದರು.
" ಣಾನು ಇದನ್ನು ಪರಿಶೀಲಿಸಬೇಕೆಂದು, ತಮ್ಮ ದೃಷ್ಟಿಕೋನ ತಿಳಿಸಬೇಕೆಂದು ತಿಳಿಸಿ ಲೋಕಸಭಾಧ್ಯಕ್ಷರಿಗೆ ತಿಳಿಸಿದ್ದೇನೆ." ವೆಂಕಯ್ಯ ನಾಯ್ಡು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಟೀಕಿಸಿ ಬರೆದ ಟ್ವೀಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು Jaitley ಬದಲಿಗೆ Mr Jaitlie ಎಂದು ತಪ್ಪಾಗಿ ಬರೆದಿದ್ದರು. ರಾಹುಲ್ ಉದ್ದೇಶಪೂರ್ವಕ ಜೇಟ್ಲಿ ಹೆಸರನ್ನು ತಪ್ಪಾಗಿ ಬರೆದಿದ್ದಾರೆ ಎಂದು ಆರೋಪಿಸಿದ್ದ ಭೂಪೇಂದ್ರ ಯಾದವ್ ರಾಜ್ಯಸಭೆಯಲ್ಲಿ ಅವರ ವಿರುದ್ಧ ನೋತೀಸ್ ಜಾರಿಗೊಳಿಸಿದ್ದರು.