ದೇಶ

ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಉದ್ದೇಶಪೂರ್ವಕವಲ್ಲ: ವರದಿ

Srinivas Rao BV
ನವದೆಹಲಿ: ಇತ್ತೀಚೆಗಷ್ಟೇ ಚೀನಾ ಅರುಣಾಚಲಪ್ರದೇಶದಲ್ಲಿ ಅತಿಕ್ರಮಣ ಮಾಡಿದ್ದು, ಈ ಅತಿಕ್ರಮಣ ಉದ್ದೇಶಪೂರ್ವಕವಲ್ಲ ಎಂದು ರಾಷ್ಟ್ರೀಯ ಭದ್ರತಾ ಪರಿಷತ್ ಹೇಳಿದೆ. 
ಕಾಮಗಾರಿ ನಡೆಸುವಂತೆ ಆದೇಶ ನೀಡಲಾಗಿದ್ದ ತಂಡಕ್ಕೆ ತಾವು ಭಾರತದ ಪ್ರದೇಶದಲ್ಲಿದ್ದೇವೆ ಎಂಬುದು ಗೊತ್ತಿರಲಿಲ್ಲ. ಅಲ್ಲಿ ಕಾಮಗಾರಿ ನಡೆಸುತ್ತಿದ್ದ ತಂಡಕ್ಕೂ ಚೀನಾ ಲಿಬರೇಷನ್ ಆರ್ಮಿಗೂ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಭದ್ರತಾ ಪರಿಷತ್ ಹೇಳಿದೆ. 
ಎಲ್ಎಸಿ ಬಳಿಯಲ್ಲಿ ಚೀನಾ ತಂಡ ಭಾರತದ ಗಡಿ ಪ್ರವೇಶ ಮಾಡಿತ್ತು. ಚೀನಾದ ತಂಡ ಭಾರತದ ಪ್ರದೇಶದಲ್ಲಿ 600 ಮೀಟರ್ ನಷ್ಟು ರಸ್ತೆ ನಿರ್ಮಿಸಿತ್ತು.  ಡಿ.26ರಂದು ನಡೆದಿದ್ದ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ ಎಂದು ಈಗ ಭಾರತ ಸರ್ಕಾರದ ಭಾಗವಾಗಿರುವ ಸಂಸ್ಥೆಯೇ ಹೇಳಿದೆ. 
SCROLL FOR NEXT