ಮನನ್ ಬಶೀರ್ ವನಿ 
ದೇಶ

ವಾಪಸ್ ಮನೆಗೆ ಬರುವಂತೆ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಪಿಎಚ್ ಡಿ ವಿದ್ಯಾರ್ಥಿಗೆ ಪೋಷಕರ ಮನವಿ

ವಾಪಸ್ ಮನೆಗೆ ಬರುವಂತೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ(ಎಎಂಯು)ದ ಪಿಎಚ್ ಡಿ ವಿದ್ಯಾರ್ಥಿಗೆ....

ಶ್ರೀನಗರ: ವಾಪಸ್ ಮನೆಗೆ ಬರುವಂತೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ(ಎಎಂಯು)ದ ಪಿಎಚ್ ಡಿ ವಿದ್ಯಾರ್ಥಿಗೆ ಆತನ ಪೋಷಕರು ಮನವಿ ಮಾಡಿದ್ದಾರೆ.
ಕಾಶ್ಮೀರದ ಕುಪ್ವಾರ ಜಿಲ್ಲೆಯ ಟೆಕ್ಕಿಪೊರ ಲೊಲಬ್ ನಿವಾಸಿ, ಸಂಶೋಧನಾ ವಿದ್ಯಾರ್ಥಿ ಮನನ್ ಬಶೀರ್ ವನಿ ಎಕೆ-47 ಗನ್ ಹಿಡಿದು, ಉಗ್ರ ಸಂಘಟನೆ ಸೇರಿರುವ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದನ್ನು ನೋಡಿ ಆತನ ಕುಟುಂಬ ಆಘಾತಕ್ಕೊಳಗಾಗಿದೆ. 
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ವನಿ ಫೋಟೋ ಅಪ್ ಲೋಡ್ ಮಾಡಿ, ಆತ ಜನವರಿ 5ರಂದು ಉಗ್ರ ಸಂಘಟನೆ ಸೇರಿರುವುದಾಗಿ ತಿಳಿಸಿದೆ.
ಮಗ ಉಗ್ರ ಸಂಘಟನೆ ಸೇರಿರುವ ವಿಷಯ ತಿಳಿದು ಆಘಾತಗೊಂಡಿರುವ ವನಿ ತಾಯಿ, ನಾನು ನಿನಗೆ ಯಾವತ್ತೂ ಹರ್ಟ್ ಮಾಡಿಲ್ಲ. ನಿನ್ನ ನಿರ್ಧಾರಗಳನ್ನು ವಿರೋಧಿಸಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸು. ಉಗ್ರಗಾಮಿ ಮಾರ್ಗ ಬಿಟ್ಟು ವಾಪಸ್ ಮನಗೆ ಬಾ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
'ಆತ ಉಗ್ರ ಸಂಘಟನೆ ಸೇರುತ್ತಾನೆ ಅಂತ ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ಆತನ ನಿರ್ಧಾರದಿಂದಾಗಿ ಈಡೀ ಕುಟುಂಬ ಆಘಾತಗೊಂಡಿದೆ' ಎಂದು ವನಿ ತಂದೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ