ಸಾಂದರ್ಭಿಕ ಚಿತ್ರ 
ದೇಶ

ಕಾಕ್ ಪಿಟ್‌ ನಲ್ಲೇ ಕಿತ್ತಾಡಿದ ಇಬ್ಬರು ಪೈಲೆಟ್‌ ಗಳನ್ನು ವಜಾಗೊಳಿಸಿದ ಜೆಟ್‌ ಏರ್ ವೇಸ್

ಹೊಸ ವರ್ಷದಂದು ಲಂಡನ್‌–ಮುಂಬೈ ವಿಮಾನ ಯಾನದ ಮಾರ್ಗ ಮಧ್ಯೆ ಕಾಕ್ ಪಿಟ್ ನಲ್ಲೇ ಕಿತ್ತಾಡಿಕೊಂಡಿದ್ದ ಜೆಟ್‌ ಏರ್ ವೇಸ್‌ ನ ಇಬ್ಬರು...

ನವದೆಹಲಿ: ಹೊಸ ವರ್ಷದಂದು ಲಂಡನ್‌–ಮುಂಬೈ ವಿಮಾನ ಯಾನದ ಮಾರ್ಗ ಮಧ್ಯೆ ಕಾಕ್ ಪಿಟ್ ನಲ್ಲೇ ಕಿತ್ತಾಡಿಕೊಂಡಿದ್ದ ಜೆಟ್‌ ಏರ್ ವೇಸ್‌ ನ ಇಬ್ಬರು ಹಿರಿಯ ಪೈಲೆಟ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಜನವರಿ 1ರಂದು 9ಡಬ್ಲ್ಯು119 ಲಂಡನ್‌–ಮುಂಬೈ ವಿಮಾನದಲ್ಲಿ ಸೇವೆಯಲ್ಲಿದ್ದ ಹಿರಿಯ ಪೈಲೆಟ್‌ ಹಾಗೂ ಮಹಿಳಾ ಕಮಾಂಡರ್‌ ನಡುವೆ ಮಾತಿಗೆ ಮಾತು ಬೆಳೆದು ಆಕೆಯ ಕೆನ್ನೆಗೆ ಹೊಡೆದಿದ್ದರು. ಕಣ್ಣೀರು ಹಾಕುತ್ತ ಆಕೆ ಕಾಕ್‌ ಪಿಟ್‌ ನಿಂದ ಹೊರಬಂದಿದ್ದರು.
ಪ್ರಯಾಣಿಕರ ಸುರಕ್ಷತೆಗೆ ಹಾನಿಯಾಗಬಹುದಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಕಾಕ್‌ಪಿಟ್ ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ಜೆಟ್‌ ಏರ್ ವೇಸ್‌ ನ ವಕ್ತಾರರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಪ್ಪು ಗ್ರಹಿಕೆಯಿಂದಾಗಿ ಇಬ್ಬರು ಪೈಲೆಟ್‌ಗಳ ನಡುವೆ ಜಗಳ ನಡೆದಿದ್ದು, ಅದನ್ನು ನಂತರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!