ಮುಂಬೈ: ಕೇಂದ್ರ ರೈಲ್ವೆ ವಲಯದಲ್ಲಿ ಬರುವ ಮಾತುಂಗಾ ಉಪನಗರ ರೈಲು ನಿಲ್ದಾಣವು ಲಿಮಕ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಈ ನಿಲ್ದಾಣದ ಎಲ್ಲಾ ಸಿಬ್ಬಂದಿಗಳೂ ಮಹಿಳೆಯರಾಗಿರಿವುದು ಈ ದಾಕಲೆಗೆ ಕಾರಣವಾಗಿದೆ ಎಂಡು ಅಧಿಕಾರಿಗಳು ಹೇಳಿದ್ದಾರೆ.
ಮಹಿಳಾ ಸಿಬ್ಬಂದಿಗಲೇ ನಿರ್ವಹಿಸುತ್ತಿರುವ ದೇಶದ ಏಕೈಕ ರೈಲ್ವೆ ನಿಲ್ದಾಣ ಎನಿಸುವ ಮಾತುಂಗಾ ನಿಲ್ದಾಣ ಸಿಬ್ಬಂದಿಗೆ ಈಗ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದ ಹೆಮ್ಮೆ.
"ಕೇಂದ್ರ ರೈಲ್ವೆ ವಲಯವು ಮಾತುಂಗಾ ನಿಲ್ದಾಣದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿದ ಆರು ತಿಂಗಳ ತರುವಾಯ ನಿಲ್ದ್ಫ್ದಾಣವು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿದೆ ಎಂದು ತಿಳಿದು ಸಂತಸವಾಗುತ್ತಿದೆ" ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಜುಲೈ 2017 ರಿಂದ ಮಹಿಳಾ ಉದ್ಯೋಗಿಗಳೇ ಈ ನಿಲ್ದಾಣವನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು
ಆರ್ ಪಿ ಎಫ್ ಸಿಬ್ಬಂದಿ ಸೆರಿ ನಿಲ್ದಾಣದಲ್ಲಿ ಒಟ್ಟು 41 ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಸಿಬ್ಬಂದಿಗಳು ನಿಲ್ದಾಣದ ವ್ಯವಸ್ಥಾಪಕಿ ಮಮತಾ ಕುಲಕರ್ಣಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.