ದೇಶ

2002ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ: 16 ವರ್ಷದ ಬಳಿಕ ಆರೋಪಿಯ ಬಂಧನ

Raghavendra Adiga
ಅಹಮದಾಬಾದ್: 2002 ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಯೊಯಾಗಿದ್ದ ವ್ಯಕ್ತಿಯನ್ನು 16 ವರ್ಷಗಳ ಬಳಿಕ ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದ ಐದು ಆರೋಪಿಗಳ ಪೈಕಿ ಒಬ್ಬನಾದ ಆಶಿಶ್ ಪಾಂಡೆಯನ್ನು ಅಸ್ಲಾಲಿ ಪ್ರದೇಶದಲ್ಲಿ ಕ್ರೈಮ್ ಬ್ರಾಂಚ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"2002 ರಲ್ಲಿ ಸಂಭವಿಸಿದ ಘಟನೆಯ ಬಳಿಕ ಎಫ್ ಐಆರ್ ನಲ್ಲಿ ಆರೋಪಿ ಎಂದು ಆರೋಪಿಸಿರುವ ಪಾಂಡೆ, ತನ್ನ ಕುಟುಂಬದೊಂದಿಗೆ ನರೋಡಾ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಆದರೆ ಬಂಧನದಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡಿದ್ದ ಮತ್ತು ಹರಿದ್ವಾರ, ವಾಪಿ ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸಿದ್ದ ಈತ ಟ್ರಾಸ್ನ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದ" ಪೋಲೀಸರು ಮಾಹಿತಿ ನೀಡಿದ್ದಾರೆ.
2002 ರ ಫೆಬ್ರುವರಿ 28 ರಂದು ಗುಲ್ಬರ್ಗ್ ಸೊಸೈಟಿಯ ಪ್ರಮುಖ ಮುಸ್ಲಿಮ್ ವಸಾಹತು ಪ್ರದೇಶಕ್ಕೆ ಗುಂಪೊಂದು ಮುತ್ತಿಗೆ ಹಾಕಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಹತ್ಯೆ ಮಾಡಿತ್ತು. ಗೋಧ್ರಾದ ನಂತರದ ಗಲಭೆಗಳಲ್ಲಿ ಇದು ಅತ್ಯಂತ ಭೀಕರವಾದದ್ದೆಂದು ಹೇಳಲಾಗಿತ್ತು.
SCROLL FOR NEXT