ದೆಹಲಿ ಹೈಕೋರ್ಟ್ 
ದೇಶ

ಉಳ್ಳವರಿಗೇ ಉಚಿತ ಸೌಲಭ್ಯ ಏಕೆ, ಏಡ್ಸ್ ರೋಗಿಗಳಿಗೆ ಏಕಿಲ್ಲ: ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಪ್ರಶ್ನೆ

ದೆಹಲಿ ನಗರಾಡಳಿತವೇಕೆ ಜನರಿಗೆ ಉಚಿತ ನೀರು ಹಾಗೂ ವಿದ್ಯುತ್ ಪೂರೈಸುತ್ತದೆ, ಮಾರಣಾಂತಿಕ ಏಡ್ಸ್ ರೋಗದಿಂದ ಪೀಡಿತರಾದ ಬಡವರಿಗೇಕೆ ಹಣಕಾಸು ನೆರವು ನೀಡುತ್ತಿಲ್ಲ.....

ನವದೆಹಲಿ: ದೆಹಲಿ ನಗರಾಡಳಿತ ಏಕೆ ಜನರಿಗೆ ಉಚಿತ ನೀರು ಹಾಗೂ ವಿದ್ಯುತ್ ಪೂರೈಸುತ್ತದೆ, ಮಾರಣಾಂತಿಕ ಏಡ್ಸ್ ರೋಗದಿಂದ ಪೀಡಿತರಾದ ಬಡವರಿಗೇಕೆ ಹಣಕಾಸು ನೆರವು ನೀಡುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಥಳೀಯ ಸರ್ಕಾರವನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನೊಳಗೊಂಡ  ವಿಭಾಗೀಯ ಪೀಠವು ದೆಹಲಿ ಸರಕಾರವನ್ನು ಈ ವಿಷಯದ ಮೇಲೆ ಪ್ರಶ್ನೆ ಮಾಡಿದೆ ಮತ್ತು "ನೀವೇನೂ ಮಾಡದೆ ಇದ್ದರೂ ಸಾಮಾಜ ಸೇವೆ ಮಾಡುವವರಂತೆ ನಟಿಸಬೇಡಿ" ಎಂದು ಪೀಠ ಸರ್ಕಾರಕ್ಕೆ ಛೀಮಾರಿ ಹಾಕಿದೆ.
"ಸಾಕಷ್ಟು ಆಸ್ತಿ ಹೊಂದಿದ ಜನರಿಗೂ ನೀವು ಉಚಿತ ನೀರು ಮತ್ತು ವಿದ್ಯುತ್ ನೀಡುತ್ತಿದ್ದೀರಿ .ಅವರು ಅವುಗಳ ಖರ್ಚು ನಿಭಾಯಿಸಬಲ್ಲದು ಮತ್ತು ಈ ಉಚಿತ ಕೊಡುಗೆ ಅವರಿಗೆ ಅಗತ್ಯವಿಲ್ಲ ವಾಸ್ತವಿಕ, ಸಮಂಜಸ ಯೋಜನೆಯಗಳಿಗೆ ಹಣ ತೊಡಗಿಸಿ" ಪೀಠ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏಡ್ಸ್ ನಿಂದ ಬಾಧಿತರಾದ ಓರ್ವ ವ್ಯಕ್ತಿ ತನ್ನ ಪಾಲಿನ ಸರ್ಕಾರಿ ಸಹಾಯಧನವನ್ನು 1,000 ರೂ. ನಿಂದ 3,000 ರೂ. ಗೆ ಹೆಚ್ಚಿಸಲು ಕೊರಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದು ಇದರ ವಿಚಾರಣೆ ಕೈಗೊಂಡ ನ್ಯಾಯಪೀಠವು ಮೇಲಿನಂತೆ  ಪ್ರಶ್ನೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ