ನವದೆಹಲಿ: ಅಭ್ಯಾಸದ ವೇಳೆ ಹೆಲಿಕಾಪ್ಟರ್ ನಿಂದ ಬಿದ್ದು ಮೂವರು ಯೋಧರಿಗೆ ಗಾಯ 
ದೇಶ

ನವದೆಹಲಿ: ಅಭ್ಯಾಸದ ವೇಳೆ ಹೆಲಿಕಾಪ್ಟರ್ ನಿಂದ ಬಿದ್ದು ಮೂವರು ಯೋಧರಿಗೆ ಗಾಯ

ಇದೇ ಜ.15ರಂದು ನಡೆಯಲಿರುವ ಸೇನಾ ದಿನಾಚರಣೆ ತಾಲೀಮಿನಲ್ಲಿ ಭಾಗವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಧ್ರುವ್ ಹೆಲಿಕಾಪ್ಟರ್ ನಿಂದ ಕೆಳಗಿ ಬಿದ್ದ.........

ನವದೆಹಲಿ: ಇದೇ ಜ.15ರಂದು ನಡೆಯಲಿರುವ  ಸೇನಾ ದಿನಾಚರಣೆ ತಾಲೀಮಿನಲ್ಲಿ ಭಾಗವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಧ್ರುವ್ ಹೆಲಿಕಾಪ್ಟರ್ ನಿಂದ ಕೆಳಗಿ ಬಿದ್ದ ಮೂವರು ಭಾರತೀಯ ಯೋಧರು ಗಾಯಗೊಂಡ  ಘಟನೆ ನವದೆಹಲಿಯಲ್ಲಿ ನಡೆದಿದೆ.
ಒಟ್ಟು ಮೂವರು ಯೋಧರು ಹೆಲಿಕಾಪ್ಟರ್ ನಿಂದ ಹಗ್ಗದ ಮೂಲಕ ಕೆಳಗಿಳಿಯುತ್ತಿದ್ದ ಸಮಯ ಈ ಘಟನೆ ನಡೆದಿದೆ. ಇಬ್ಬರು ಯೋಧರು ಹಗ್ಗ ಹಿಡಿದು ಕೆಳಗಿಳಿಯುತ್ತಿದ್ದಾಗ ಮೂರಣೇ ಯೋಧನೂ ಹಗ್ಗದ ಮೂಲಕ ಕೆಳಗೆ ಇಳಿಯಲು ಪ್ರಾರಂಭಿಸಿದ್ದಾನೆ. ಆಗ ನಡುವೆಯೇ ಹಗ್ಗ ತುಂಡಾಗಿದೆ. ಪರಿಣಾಮ ಮೂವರು ಯೋಧರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.  ಮಂಗಳವಾರದಂದು ಸಂಭವಿಸಿದ ಈ ಘಟನೆಯ ದೃಶ್ಯಾವಳಿಗಳು ರಾಷ್ಟ್ರೀಯ ಮಾದ್ಯಮಗಳಲ್ಲಿ ಇಂದು ಪ್ರಸಾರವಾಗಿದೆ.
ಗಾಯಗೊಂಡ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.
ಧ್ರುವ್ ಹೆಲಿಕಾಪ್ಟರ್ ನ್ನು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್l) ಸಂಸ್ಥೆ ಸ್ಥಳೀಯವಾಗಿ ಅಭಿವೃದ್ದಿಪಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT