ಪಿಡಿಪಿ ಶಾಸಕ ಏಜಾಜ್ ಅಹ್ಮದ್ ಪೀರ್ (ಸಂಗ್ರಹ ಚಿತ್ರ) 
ದೇಶ

ಕಾಶ್ಮೀರದಲ್ಲಿ ಸಾವನ್ನಪ್ಪುವ ಉಗ್ರರು ಹುತಾತ್ಮರು, ಅವರ ಸಾವನ್ನು ನಾವು ಸಂಭ್ರಮಿಸಬಾರದು: ಪಿಡಿಪಿ ಶಾಸಕನ ಹೇಳಿಕೆ

ಕಾಶ್ಮೀರಿ ಉಗ್ರರೆಲ್ಲರೂ, ನಮ್ಮ ಸಹೋದರರು..'ಹುತಾತ್ಮ ಉಗ್ರ'ರ ಸಾವನ್ನು ನಾವು ಸಂಭ್ರಮಿಸಬಾರದು ಎಂದು ಹೇಳುವ ಮೂಲಕ ಕಾಶ್ಮೀರದ ಪಿಡಿಪಿ ಎಂಎಲ್ಎ ಐಜಾಜ್ ಅಹ್ಮದ್ ಪೀರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನವದೆಹಲಿ: ಕಾಶ್ಮೀರಿ ಉಗ್ರರೆಲ್ಲರೂ ನಮ್ಮ ಸಹೋದರರು..'ಹುತಾತ್ಮ ಉಗ್ರ'ರ ಸಾವನ್ನು ನಾವು ಸಂಭ್ರಮಿಸಬಾರದು ಎಂದು ಹೇಳುವ ಮೂಲಕ ಕಾಶ್ಮೀರದ ಪಿಡಿಪಿ ಎಂಎಲ್ಎ ಐಜಾಜ್ ಅಹ್ಮದ್ ಪೀರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಿಡಿಪಿ ಶಾಸಕ ಐಜಾಜ್ ಅಹ್ಮದ್ ಪೀರ್, ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರೆಲ್ಲರೂ ಅಪ್ರಾಪ್ತರಾಗಿದ್ದು, ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದು ತಿಳಿಯುತ್ತಿಲ್ಲ. ಸತ್ತ ಕಾಶ್ಮೀರಿ ಉಗ್ರರೆಲ್ಲರೂ ನಮ್ಮ ಸಹೋದರರು..'ಹುತಾತ್ಮ ಉಗ್ರ'ರ ಸಾವನ್ನು ನಾವು ಸಂಭ್ರಮಿಸಬಾರದು. ಕಾಶ್ಮೀರದ ಇಂದಿನ ಸ್ಥಿತಿಗೆ ನಮ್ಮ ಸಾಮೂಹಿಕ ವೈಫಲ್ಯವೇ ಕಾರಣ ಎಂದು ಹೇಳಿದ್ದಾರೆ. ಅಂತೆಯೇ ಹುತಾತ್ಮ ಯೋಧರ ಕುರಿತೂ ದುಃಖ ವ್ಯಕ್ತಪಡಿಸಿದ ಐಜಾಜ್ ಅಹ್ಮದ್, ಕಾಶ್ಮೀರದಲ್ಲಿ ಸಾಯುತ್ತಿರುವ ಸೈನಿಕರನ್ನು ಕಂಡರೆ ದುಃಖವಾಗುತ್ತದೆ. ನಮ್ಮದೇ ಸೈನಿಕರು ಉಗ್ರರ ವಿರುದ್ಧ ಸೆಣಸಾಡಿ ಸಾಯುತ್ತಿದ್ದಾರೆ. ಹುತಾತ್ಮ ಯೋಧರ ಕುಟುಂಬಕ್ಕೆ ಸಾವಿನ ನೋವು ತಡೆಯುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಐಜಾಜ್ ಹೇಳಿದ್ದಾರೆ. 
ಇದೀಗ ಪಿಡಿಪಿ ಶಾಸಕನ ಹೇಳಿಕೆ ವಿರುದ್ಧ ವ್ಯಾಪಕ ಟೀಕೆಗಳು ಹರಿದುಬರುತ್ತಿದ್ದು, ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಸರ್ಕಾರ ರಚನೆ ಮಾಡಿರುವ ಬಿಜೆಪಿ ಪಕ್ಷದ ಮುಖಂಡರೇ ಶಾಸಕ ಐಜಾಜ್ ಅಹ್ಮದ್ ಪೀರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಪ್ರತ್ಯೇಕತಾವಾದಿಗಳು ಮತ್ತು ಉಗ್ರರು ಕಾಶ್ಮೀರದ ಪ್ರಜೆಗಳ ಮತ್ತು ಕಾಶ್ಮೀರ ಅಭಿವೃದ್ಧಿ ಶತ್ರುಗಳು.. ಉಗ್ರರು ಹೇಗೆ ಕಾಶ್ಮೀರಿಗಳ ಸಹೋದರರಾಗುತ್ತಾರೆ ಎಂದು ಐಜಾಜ್ ಹೇಳಿಕೆಗೆ ಪರೋಕ್ಷ ಟೀಕೆ ಮಾಡಿದ್ದಾರೆ.
ನಿನ್ನೆಯಷ್ಟೇ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಕಾಶ್ಮೀರ ಸಿಎಂ ಮೆಹಬೂಬ ಮುಫ್ತಿ ಅವರು, ಉಗ್ರವಾದದತ್ತ ಮುಖಮಾಡಿರುವ ಕಾಶ್ಮೀರ ಯುವಕ ಮನವೊಲಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪಿಡಿಪಿ ಮುಖಂಡನ ಹೇಳಿಕೆ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!