ಪ್ರಧಾನಿ ನರೇಂದ್ರ ಮೋದಿ 
ದೇಶ

ಹೊಸತನವನ್ನು ಸೃಷ್ಟಿಸಲು ಯುವಕರನ್ನು ಪ್ರೋತ್ಸಾಹಿಸಬೇಕು: ನರೇಂದ್ರ ಮೋದಿ

"ದೇಶದ ಯುವಜನರನ್ನು 'ಹೊಸತನವನ್ನು ಅವಿಶ್ಕಾರಿಸುವವರು' ಎಂದು ಮತ್ತು 'ಉದ್ಯೋಗ ಸೃಷ್ಟಿಕರ್ತರನ್ನಾಗಿ' ಮಾಡಲು ನಮ್ಮ ಸರ್ಕಾರ ಬಯಸುತ್ತದೆ."

ಗ್ರೇಟರ್ ನೊಯ್ಡಾ (ಉತ್ತರ ಪ್ರದೇಶ): "ದೇಶದ ಯುವಜನರನ್ನು 'ಹೊಸತನವನ್ನು ಅವಿಶ್ಕಾರಿಸುವವರು' ಎಂದು ಮತ್ತು 'ಉದ್ಯೋಗ ಸೃಷ್ಟಿಕರ್ತರನ್ನಾಗಿ' ಮಾಡಲು ನಮ್ಮ ಸರ್ಕಾರ ಬಯಸುತ್ತದೆ." ಪ್ರಧಾನಿ ಮೋದಿ ಹೇಳಿದ್ಡಾರೆ. 
22ನೇ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ "ನಾವು 1947 ರ ನಂತರ ಹುಟ್ಟಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ನಮಗೆ ಅವಕಾಶವಿರಲಿಲ್ಲ. ಆದರೆ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತತ್ರ್ಯ ಗಳಿಸಲು ನಮಗೆ ಸಹಾಯ ಮಾಡಿದ ಮಹಾನ್ ಪುರುಷರು ಮತ್ತು ಮಹಿಳೆಯರ ಕನಸುಗಳನ್ನು ಪೂರೈಸಲು ನಮಗೆ ಅವಕಾಶವಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸನ್ನು ನನಸಾಗಿಸಲು ನಾವು  ನಮ್ಮ ಯುವ ಜನತೆಯನ್ನು  ಉದ್ಯೋಗ ಸೃಷ್ಟಿಕರ್ತರನ್ನಾಗಿ  ಮಾಡಲು ಬಯಸುತ್ತೇವೆ.ಅವರು ನಾವೀನ್ಯತೆಯನ್ನು ಹೊಂದಲು ಪ್ರೋತ್ಸಾಹಿಸುತ್ತೇವೆ." ಎಂದರು.
ದೇಶದ ಎಲ್ಲಾ ಜಿಲ್ಲೆಗಳಲ್ಲಿ ಅಣಕು ಸಂಸತ್ತು ಚಟುವತಿಕೆ ನಡೆಸಲು ಮೋದಿ ತಮ್ಮ ಡಿಸೆಂಬರ್ ತಿಂಗಳ ಮನ್ ಕಿ ಬಾತ್ ನಲ್ಲಿ ಹೇಳಿದ್ದರು. ಇಂತಹಾ ಅಣಕು ಪ್ರದರ್ಶನಗಳು ನಮ್ಮ ಯುವಕರಲ್ಲಿ ಚರ್ಚೆಗಳಲ್ಲಿ ಪಾಲ್ಗೊಂಡು ಮಾತನಾಡುವ ದೈರ್ಯ ತುಂಬಲಿದೆ. ಎಂದು ಮೋದಿ ಹೇಳಿದ್ದಾರೆ.
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಇಂದು ಗ್ರೇಟರ್ ನೋಯ್ಡಾದಲ್ಲಿರುವ ಗೌತಮ ಬುದ್ದ ವಿಶ್ವ ವಿದ್ಯಾನಿಲಯದಲ್ಲಿ ಐದು ದಿನಗಳ ಯೂತ್ ಫೆಸ್ಟಿವಲ್ ಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ.ಉತ್ತರ ಪ್ರದೇಶ ಸರ್ಕಾರದ ನೆರವಿನೊಡನೆ ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವಾಲಯ ಈ ಫೆಸ್ಟಿವಲ್ ಅನ್ನು ಆಯೋಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ