ದೇಶ

ಗುಜರಾತ್: ಶೈಕ್ಷಣಿಕ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ, ಹಾರ್ದಿಕ್ ಪಟೇಲ್ ವಿರುದ್ಧ ಎಫ್ಐಆರ್

Raghavendra Adiga
ಜಾಮ್ ನಗರ್ (ಗುಜರಾತ್): ಎರಡು ತಿಂಗಳುಗಳ ಹಿಂದೆ ಗುಜರಾತ್ ನ ಜಾಮ್ ನಗರ್ ಜಿಲ್ಲೆಯ ಗ್ರಾಮದಲ್ಲಿ ಆಯೋಜಿತವಾಗಿದ್ದ ಶಿಕ್ಷಣ ಮತ್ತು ರೈತರ ಕಲ್ಯಾಣ ಸಮಾವೇಶದಲ್ಲಿ "ರಾಜಕೀಯ" ಭಾಷಣವನ್ನು ಮಾಡಿದ ಪಾಟೀದರ್ ಸಮುದಾಯ ಮುಖಂಡ  ಹಾರ್ದಿಕ್ ಪಟೇಲ್ ವಿರುದ್ಧ ಎಫ್ಐಆರ್ ದಾಕಲಾಗಿದೆ. 
ಧುತಾರ್ಪರ್ ಗ್ರಾಮದಲ್ಲಿ ಶಿಕ್ಷಣ ಮತ್ತು ರೈತರ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಲಾಗಿತ್ತಾದರೂ, ಹಾರ್ಡಿಕ್ ಪತೇಲ್ ಇದನ್ನೊಂದು "ರಾಜಕೀಯ" ಕಾರ್ಯಕ್ರಮವಾಗಿ ಪರಿವರ್ತಿಸಿದ್ದಾರೆ ಎಂದು ಜಾಮ್ ನಗರ್ (ಗ್ರಾಮೀಣ) ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಆರ್.ಕೆ. ಪಟೇಲ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾಗಿ ಪೋಲೀಸರು ಹೇಳಿದ್ದಾರೆ.
ಕಾರ್ಯಕ್ರಮ ನಿಯಮಾವಳಿಯನ್ನು ಹಾರ್ದಿಕ್ ಹಾಗೂ ಅವರ ಸಹವರ್ತಿ ಅಂಕಿತ್ ದಾಡಿಯಾ ಅವರುಗಳು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಜಾಮ್ ನಗರ 'ಎ' ಡಿವಿಷನ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.
SCROLL FOR NEXT