ಯೋಗಿ ಆದಿತ್ಯನಾಥ್ ಮತ್ತು ಸಿದ್ದರಾಮಯ್ಯ, 
ದೇಶ

ಹನ್ನೆರಡಕ್ಕೂ ಹೆಚ್ಚು ಹಿಂದೂ ಯುವಕರನ್ನು ಕೊಲ್ಲಿಸಿದ ಸಿದ್ದರಾಮಯ್ಯ ತಾವು ಹಿಂದು ಎನ್ನುತ್ತಾರೆ: ಯೋಗಿ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳನ್ನು ಕೊಲ್ಲಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

ಲಖ್ನೋ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳನ್ನು ಕೊಲ್ಲಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಇದರೊಡನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕೋಮುವಾದಿ ಬಿಕ್ಕಟ್ಟನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಸಂಬಂಧ ಇತ್ತೀಚೆಗೆ ಸಿದ್ದರಾಮಯ್ಯ ನಿಡಿದ್ದ ಹೇಳಿಕೆ ಸಂಬಂಧ ಉತ್ತರ ಪ್ರದೇಶ ಬಿಜೆಪಿ ಘಟಕ ತನ್ನ ಟ್ವೀಟ್ಟರ್ ಖಾತೆಯಲ್ಲಿ ಖಂಡನೆ ವ್ಯಕ್ತಪಡಿಸಿದ್ದು ಕಳೆದ ಎರಡು ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಹತ್ಯೆಗೊಳಗಾದ ಹನ್ನೆರಡು ಹಿಂದೂ ಯುವಕರ ಚಿತ್ರಗಳನ್ನು ಅಪ್ ಲೋಡ್ ಮಾಡಿದೆ. ಜತೆಗೆ "ಯೋಗಿ ಈ ಸಂಬಂಧ ಪ್ರಶ್ನಿಸಿದಾಗ ಸಿದ್ದರಾಮಯ್ಯ ತಾವು ಸ್ವತಃ ಹಿಂದೂ ಎಂದು ಹೇಳಿಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದೆ.
ಇದರೊಡನೆ ಗುಜರಾತ್ ವಿಧಾನಸಭೆ ಚುನಾವಣೆ ವೇಳೆಯಲ್ಲಿ ರಾಹುಲ್ ಗಾಂಧಿ ಹಲವು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದನ್ನು ಟೀಕಿಸಿರುವ ಉತ್ತರ ಪ್ರದೇಶ ಬಿಜೆಪಿ ಅವರು ತಾವು ಹಿಂದು ಎಂದು ತೋರಿಸಲು ಏನೇನೋ ಸಾಹಸಗಳನ್ನು ಮಾಡುತ್ತಿದ್ದಾರೆ ಎಂದಿದೆ. "ನೀವು ಕಳೆದ ಐದು ವರ್ಷಗಳಲ್ಲಿ ಒಂದು ಚುಕ್ಕೆಯಷ್ಟು ಕೆಲಸ ಮಾಡದಿದ್ದರೂ, ಕಾಂಗ್ರೆಸ್ನ 'ರಾಜಕುಮಾರ' ಯಾವ ಪ್ರತಿಕ್ರಿಯೆ  ನೀಡುತ್ತಿಲ್ಲ." ಎಂದು ವೀಡಿಯೋದಲ್ಲಿ ಹೇಳಲಾಗಿದ್ದು ಕರ್ನಾಟಕದಲ್ಲಿ 1002 ರೈತರ ಆತ್ಮಹತ್ಯೆ ನಡೆದಿದೆ ಎನ್ನುವುದನ್ನು ಸಹ ಮುಖ್ಯಾಂಶವೆಂದು ತೋರಿಸಿದೆ.
ಆದಿತ್ಯನಾಥ್ ಕಳೆದ ವಾರ ಬೆಂಗಳೂರಿನಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಸಿದ್ದರಾಮಯ್ಯ ಧರ್ಮ ಮತ್ತು ರಾಜಕಾರಣವನ್ನು ಬೆರಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು, ಇದರೊಡನೆ ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ದೇವಾಲಯ ಭೇಟಿಗಳನ್ನೂ ಟೀಕಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 world cup: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಬೆಥೆಲ್ ಶತಕ ವ್ಯರ್ಥ; ಆಂಗ್ಲರ ಮಣಿಸಿದ ಭಾರತ ಫೈನಲ್ಸ್ ಗೆ ಲಗ್ಗೆ

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

GSDPಯಲ್ಲಿ ಕರ್ನಾಟಕವನ್ನೂ ಮೀರಿಸಿದ ಉತ್ತರ ಪ್ರದೇಶ: ದೇಶದ ಅತಿ ದೊಡ್ಡ ಆರ್ಥಿಕತೆ ಇರುವ ರಾಜ್ಯ ಯಾವುದು?

T20 World Cup 2026 ಸೆಮಿಫೈನಲ್: ಸ್ಯಾಮ್ಸನ್ ಮಿಂಚಿನ ಅರ್ಧಶತಕ; ಇಂಗ್ಲೆಂಡ್ ಗೆ ಬೃಹತ್ 254 ರನ್ ಟಾರ್ಗೆಟ್ ನೀಡಿದ ಭಾರತ!

ಮಧ್ಯಪ್ರಾಚ್ಯ ಸಂಘರ್ಷ: ಅಚ್ಚರಿ ಮೂಡಿಸಿದ ಜೈಶಂಕರ್- ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ

SCROLL FOR NEXT