ದೇಶ

ಜಾರ್ಖಂಡ್ ನ ರಾಮಘಡ ಐತಿಹಾಸಿಕ ಸ್ಮಶಾನವನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿಸುವತ್ತ ಚೀನಾ ಆಸಕ್ತಿ

Raghavendra Adiga
ರಾಮಘಡ: ಜಾರ್ಖಂಡ್ ನ ರಾಮಘಡದಲ್ಲಿರುವ ರುದ್ರ ಭೂಮಿಯನ್ನು ವಿಶ್ವ ದರ್ಜೆಯ ಪ್ರವಾಸಿ ಸ್ಥಳವಾಗಿ ಅಭಿವೃದ್ದಿಪಡಿಸಲು ಚೀನಾ ಆಸಕ್ತಿ ತೋರಿದೆ.
ಎಂ.ಎನ್.ಝಾನ್ವು ನೇತೃತ್ವದ ಚೀನಾ ಅಧಿಕಾರಿಗಳ ತಂಡ ಶುಕ್ರವಾರ ರಾಮಘಡದ ಐತಿಹಾಸಿಕ ರುದ್ರ ಭೂಮಿಗೆ ಭೇಟಿ ನೀಡಿದ್ದು ಎರಡನೇ ಮಹಾಯುದ್ಧ ವೇಳೆ ಜಪಾನ್ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಇದೇ ವೇಳೆ ರಾಮಘಡದ ಆಡಳಿತಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಚೀನಾ ತಂಡ ರುದ್ರ ಭೂಮಿಯನ್ನು ವಿಶ್ವದರ್ಜೆಯ ಪ್ರವಾಸೀ ಸ್ಥಳವಾಗಿ ಅಭಿವೃದ್ದಿಪಡಿಸಲು ಚೀನಾ ಆಸಕ್ತಿ ತಾಳಿದೆ ಎಂದು ಹೇಳಿದ್ದಾರೆ.ಭಾರತ-ಚೀನಾ ಸ್ನೇಹ ಸಂಬಂಧದ ಸಾಕ್ಷಿಯಾಗಿ ಈ ರುದ್ರ ಭೂಮಿ ಉಳಿಯಬೇಕಿದೆ ಎಂದ ಅಧಿಕಾರಿಗಳು ಈ ಕಾರ್ಯಕ್ಕೆ ಚೀನಾ ಸಹಕಾರ ನೀಡಲಿದೆ ಎಂದಿದ್ದಾರೆ.
ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಜಪಾನ್ ವಿರುದ್ಧ ಸೆಣೆಸಿ ಸಾವನ್ನಪ್ಪಿದ 667 ಚೀನಾ ಸೈನಿಕರನ್ನು ರಾಮಘಡದ  ಗ್ಯಾರಿಸನ್ ಪಟ್ಟಣದಲ್ಲಿ ಸಮಾಧಿ ಮಾಡಲಾಗಿತ್ತು.
SCROLL FOR NEXT