ಬಳ್ಳಾರಿ: ಅಪಘಾತದಲ್ಲಿ ಮೃತಪಟ್ಟ ಖಾಸಗಿ ವಾಹಿನಿಯ ವರದಿಗಾರನ ಮೃತದೇಹವನ್ನು ಕಸ ತುಂಬುವ ವಾಹನದಲ್ಲಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ವರದಿ ಕೇಳಿದ್ದಾರೆ.
ಮೌನೇಶ ಪೋತರಾಜ್(28) ಎಂಬವರು ಶನಿವಾರ ರಾತ್ರಿ ಹಾನಗಲ್ ನ ಗಂಡೂರು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಪೋತರಾಜ್ ಅವರ ಮೃತದೇಹವನ್ನು ಹಾನಗಲ್ ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್ ನಲ್ಲಿ ರವಾನೆ ಮಾಡಲಾಗಿತ್ತು. ಈ ಸಂಬಂಧ ಉತ್ತರ ವಲಯದ ಐಜಿಪಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಕೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಘಟನೆ ಬಗ್ಗೆ ತಿಳಿದು ನೋವಾಗಿದೆ, ಉತ್ತರ ವಿಭಾಗದ ಎಡಿಜಿಪಿ ಹಾಗೂ ಸಂಚಾರಿ ವಿಭಾಗದ ಕಮಿಷನರ್ ಅವರಿಂದ ವರದಿ ಕೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.