ಶ್ರೀನಗರ: ಪಾಕಿಸ್ತಾನದಲ್ಲಿದ್ದ ಬಾಂಗ್ಲಾದೇಶದ ವಿಭಜನೆಗೆ ನಾವು ಕಾರಣರಲ್ಲ..ನೆರೆಯ ದೇಶದ ಆಂತರಿಕ ಸಮಸ್ಯೆಗಳೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ ಅವರು, ಪಾಕಿಸ್ತಾನ ಮತ್ತು ಭಾರತ ದೇಶಗಳಲ್ಲಿ ದುರಂತಗಳಿಗೆ ನಾವು ಕಾರಣರಲ್ಲ. ಪಾಕಿಸ್ತಾನದಲ್ಲಿದ್ದ ಬಾಂಗ್ಲಾದೇಶ ವಿಭಜನೆಗೆ ಪಾಕಿಸ್ತಾನದ ಆಂತರಿಕ ಗೊಂದಲಗಳು ಕಾರಣವೇ ಹೊರತು.. ಅದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪಾಕಿಸ್ತಾನಕ್ಕೆ ತನ್ನದೇ ಆದ ಸಮಸ್ಯೆಗಳಿದ್ದು, ಬಾಂಗ್ಲಾದೇಶ ವಿಭಜನೆಯಲ್ಲಿ ನಮ್ಮ ಪಾತ್ರವಿತ್ತು ಎಂದು ಪಾಕ್ ನಂಬಿದೆ. ಆದರೆ ನಾವು ವಿಭಜಕರಲ್ಲ. ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಭಜಿಸುವಲ್ಲಿ ನಮ್ಮ ಪಾತ್ರವೇನೂ ಇಲ್ಲ. ಇದು ಆ ದೇಶದ ದುರಂತವಷ್ಟೇ ಎಂದು ಹೇಳಿದ್ದಾರೆ.
ಅಂತೆಯೇ ಬಾಂಗ್ಲಾದೇಶ ವಿಭಜನೆ ನಮ್ಮ ಸೃಷ್ಟಿಯಲ್ಲ... ಅದೊಂದು ದುರಂತ ಮತ್ತು ಆ ದುರಂತದ ಪರಿಣಾಮವನ್ನು ಇಂದಿಗೂ ನಾವು ಅನುಭವಿಸುತ್ತಿದ್ದೇವೆ. ಉಭಯ ದೇಶಗಳಲ್ಲಿನ ದುರಂತಗಳಲ್ಲಿ ಎರಡೂ ದೇಶಗಳ ಪಾತ್ರ ಸಮಾನವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕಳೆದ ವಾರವಷ್ಟೇ ಪ್ರಧಾನಿ ಮೋದಿ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಿದ್ದ ಫಾರೂಕ್ ಅಬ್ದುಲ್ಲಾ ಮೋದಿ ಸರ್ಕಾರಕ್ಕೆ ಪಾಕ್ ನೊಂದಿಗೆ ಪುನಃ ದ್ವಿಪಕ್ಷೀಯ ಸಂಬಂಧ ಮುಂದುವರೆಸುವ ಧೈರ್ಯವಿದೆ. ಅಂತೆಯೇ ಇಂದಿಗೂ ಪಾಕಿಸ್ತಾನದೊಂದಿಗೆ ಮಾತುಕತೆ ಪುನಾರಂಭಿಸುವ ಸಾಧ್ಯತೆ ಕುರಿತು ವಿಶ್ವಾಸ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಮುಫ್ತಿ ಮೆಹಬೂಬ ಸಿಎಂಗೆ ಧನ್ಯವಾದ ಹೇಳಿದ್ದರು.