ದೇಶ

ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗೆ ಇಸ್ರೇಲ್ ಗೆ ಮೋದಿ ಆಹ್ವಾನ; ಪ್ರಧಾನಿ ಮೋದಿ ಕ್ರಾಂತಿಕಾರಿ- ಬೆಂಜಮಿನ್ ನೇತನ್ಯಾಹು

Srinivas Rao BV
ನವದೆಹಲಿ: ಇಸ್ರೇಲ್ ಪ್ರಧಾನಿಯ ಭಾರತ ಪ್ರವಾಸದ 2 ನೇ ದಿನ ಭಾರತ- ಇಸ್ರೇಲ್ ಸೈಬರ್ ಸೆಕ್ಯುರಿಟಿ, ಇಂಧನ, ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ಸೇರಿದಂತೆ 9 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.  
ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗಾಗಿ ಇಸ್ರೇಲ್ ಗೆ ಆಹ್ವಾನ ನೀಡಿದ್ದಾರೆ. ಉದಾರೀಕರಣಗೊಂಡಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಬಳಸಿಕೊಂಡು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇಸ್ರೇಲ್ ಗೆ ಆಹ್ವಾನ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಇದೇ ವೇಳೆ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು  ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರನ್ನು ಕ್ರಾಂತಿಕಾರಿ ಎಂದು ಬಣ್ಣಿಸಿದ್ದಾರೆ. ಸಿಂಗಲ್ ಬ್ರಾಂಡ್ ರಿಟೇಲ್ ವಲಯದಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. 
SCROLL FOR NEXT