ತಾಜ್ ಮಹಲ್ ಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ನೇತಾನ್ಯಹು
ಆಗ್ರಾ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಮಂಗಳವಾರ ವಿಶ್ವದ ಏಳು ಅದ್ಬುತಗಳಲ್ಲಿ ಒಂದಾದ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ.
ಬೆಂಜಮಿನ್ ನೇತಾನ್ಯಹು ಮತ್ತು ಅವರ ಪತ್ನಿ ಸಾರಾ ಇಂದು ಬೆಳಗ್ಗೆ ತಾಜ್ ಮಹಲ್ ಗೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ನೇತನ್ಯಾಹು ದಂಪತಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ನೇತಾನ್ಯಹು ದಂಪತಿ ತಾಜ್ ಮಹಲ್ ನಲ್ಲೇ ಕೆಲವು ಗಂಟೆಗಳನ್ನು ಕಳೆಯಲಿದ್ದು, ಈ ವೇಳೆ ತಾಜ್ ಮಹಲ್ ಸಂಪೂರ್ಣ ಸೌಂದರ್ಯ ಸವಿಯಲಿದ್ದಾರೆ.
ಬಳಿಕ ಇಸ್ರೇಲ್ ಪ್ರಧಾನಿ ನೇತಾನ್ಯಹು ಅವರು ದೆಹಲಿಗೆ ವಾಪಸ್ ಆಗಲಿದ್ದು, ಸಂಜೆ 4.30ಕ್ಕೆ ದೆಹಲಿಯ ರೈಸೀನಾದಲ್ಲಿ ತಮ್ಮ ಭಾಷಣ ಮಾಡಲಿದ್ದಾರೆ. ಪ್ರಸ್ತುತ ಇಸ್ರೇಲ್ ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ತಾಜ್ ಮಹಲ್ ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಇಸ್ರೇಲ್ ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ನಿನ್ನೆಯಿಂದಲೇ ತಾಜ್ ಮಹಲ್ ನಲ್ಲಿ ವ್ಯಾಪಕ ಭದ್ರತೆ ಏರ್ಪಡಿಸಲಾಗಿದೆ.