ದೇಶ

ಕಾಬುಲ್: ಭಾರತದ ರಾಯಭಾರಿ ಕಚೇರಿ ಮೇಲೆ ಬಿದ್ದ ರಾಕೆಟ್- ಅಧಿಕಾರಿಗಳು ಸುರಕ್ಷಿತ

Manjula VN
ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್'ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಆವರಣದಲ್ಲಿ ರಾಕೆಟ್ ಬಿದ್ದಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ ಎಂದು ಮಂಗಳವಾರ ತಿಳಿದುಬಂದಿದೆ. 
ಕಾಬುಲ್ ನಲ್ಲಿರುವ ಭಾರತತದ ರಾಯಭಾರಿ ಕಚೇರಿ ಚಾನ್ಸೆರಿ ಆವರಣದಲ್ಲಿ ರಾಕೆಟ್ ಬಿದ್ದಿದ್ದು, ಎಲ್ಲಾ ಭಾರತೀಯ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಸೋಮವಾರ ರಾತ್ರಿ ಮಾಹಿತಿ ನೀಡಿದ್ದಾರೆ. 
ರಾಯಭಾರಿ ಕಚೇರಿಯ ಆವರಣದಲ್ಲಿ ರಾಕೆಟ್ ಬಿದ್ದಿರುವ ಪರಿಣಾಮ ಮೂರು ಅಂತಸ್ತಿನ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಬ್ಬರ ನಿವಾಸ ಜಖಂಗೊಂಡಿದೆ. ಇದರಲ್ಲಿ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. ಎಲ್ಲಾ ಭಾರತೀಯರು ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆಂದು ಸುಷ್ಮಾ ಅವರು ಟ್ವೀಟ್ ಮಾಡಿದ್ದಾರೆ. 
ಇದರಂತೆ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರೂ ಕೂಡ ಟ್ವೀಟ್ ಮಾಡಿದ್ದು, ಅಫ್ಘಾನಿಸ್ತಾನದ ಕಾಬೂಲ್ ನ ಭಾರತೀಯ ರಾಯಭಾರಿ ಕಚೇರಿ ಮೇಲೆ ರಾಕೆಟ್ ಬಿದ್ದಿದ್ದು, ಯಾವುದೇ ರೀತಿಯ ಸಾವುನೋವುಗಳು ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT