ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭಾರತ ಅಪಾಯಕಾರಿ ಅಲ್ಲ ಎಂಬುದನ್ನು ಮನವರಿಕೆ ಮಾಡಲು ಅಮೆರಿಕ ಯತ್ನ: ಪಾಕಿಸ್ತಾನ

ಪಾಕಿಸ್ತಾನಕ್ಕೆ ಭಾರತ ಮಾರಕವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಹೇಳಿದ್ದಾರೆ.

ಪಾಕಿಸ್ತಾನ
Srinivas Rao BV
Updated On : 16 Jan 2018, 6:14 am
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಭಾರತ ಮಾರಕವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಹೇಳಿದ್ದಾರೆ. 
ಪಾಕಿಸ್ತಾನ ಭಾರತದೆಡೆಗಿನ ಕಾರ್ಯತಂತ್ರದ ನಿಲುವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಅಮೆರಿಕ ಬಯಸುತ್ತಿದೆ. ಅಮೆರಿಕದೊಂದಿಗೆ ವಿನಯವಾಗಿಯೂ ನಿಷ್ಟುರವಾಗಿಯೂ ಮಾತುಕತೆ ನಡೆಸಬೇಕಿದೆ ಎಂದು ಪಾಕ್ ರಕ್ಷಣಾ ಸಚಿವ ಖುರ್ರಮ್ ದಸ್ತಗಿರ್ ಹೇಳಿದ್ದಾರೆ. 
ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ಹೇಳಿಕೆ ನೀಡಿರುವ ರಕ್ಷಣಾ ಸಚಿವ, ಭಾರತ ಎಲ್ಒಸಿಯಲ್ಲಿ ನಡೆಸುತ್ತಿರುವ ಆಕ್ರಮಣವನ್ನು ಅಮೆರಿಕ ನಿರಾಕರಿಸಿದೆ, ಭಾರತದ ಬಗ್ಗೆ ಇರುವ ಅಭಿಪ್ರಾಯವೇ ಅಮೆರಿಕ- ಪಾಕಿಸ್ತಾನದ ಭಿನ್ನಾಭಿಪ್ರಾಯಗಳಿಗೆ ಮೂಲ, ಆದ್ದರಿಂದ ಅಮೆರಿಕದೊಂದಿಗೆ ವಿನಯವಾಗಿಯೂ ನಿಷ್ಟುರವಾಗಿಯೂ ಮಾತುಕತೆ ನಡೆಸಬೇಕಿದೆ ಎಂದು ಪಾಕ್ ರಕ್ಷಣಾ ಸಚಿವ ಅಭಿಪ್ರಾಯಪಟ್ಟಿದ್ದಾರೆ.  

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement