ಗೌತಮ್ ಗಂಭೀರ್ 
ದೇಶ

ಪಬ್ ಗೆ ಗೌತಮ್ ಗಂಭೀರ್ ಹೆಸರು, ದೆಹಲಿ ಪಬ್ ಗಳಿಗೆ ಹೈಕೋರ್ಟ್ ನೋಟೀಸ್

ಗೌತಮ್ ಗಂಭೀರ್ ಹೆಸರನ್ನು ತನ್ನ ಟ್ಯಾಗ್ ಲೈನ್ ನಲ್ಲಿ ಬಳಸುತ್ತಿದ್ದ ದೆಹಲಿಯ ಬಾರ್ ಮಾಲೀಕರಿಗೆ ದೆಹಲಿ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.

ನವದೆಹಲಿ: ಗೌತಮ್ ಗಂಭೀರ್ ಹೆಸರನ್ನು ತನ್ನ ಟ್ಯಾಗ್ ಲೈನ್ ನಲ್ಲಿ ಬಳಸುತ್ತಿದ್ದ ದೆಹಲಿಯ ಬಾರ್ ಮಾಲೀಕರಿಗೆ ದೆಹಲಿ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜಿ ಎಸ್ ಸಿಸ್ತಾನಿ ಮತ್ತು ಸಂಗೀತ ದಹಿಂಘಾ ಸೆಹಗಲ್ ಅವರನ್ನೊಳಗೊಂಡ ಪೀಠವು ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಡಿಎಪಿ ಆಂಡ್ ಕೋ ನಡೆಸುತ್ತಿರುವ ಘುಂಗುರೂ ಮತ್ತು ಹವಾಲಾತ್ ಎಂಬ ಎರಡು ಪಬ್ ಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ವಿಶೇಷವೆಂಡರೆ ಈ ಬಾರ್ ಮತ್ತು ಪಬ್ ಗಳನ್ನು ನಡೆಸುತ್ತಿರುವ ಮಾಲೀಕರ ಹೆಸರು ಸಹ ಗೌತಮ್ ಗಂಭೀರ್ ಎಂದಾಗಿದೆ. ಈ ಸಂಬಂಧ ಇವರಿಗೆ ಸಹ ನೋಟೀಸ್ ಜಾರಿಗೊಳಿಸಲಾಗಿದೆ.
ಇದಕ್ಕೂ ಮುನ್ನ ಕ್ರಿಕೆಟಿಗ ಗೌತಮ್ ಗಂಭೀರ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಡಿ.13ರಂದು ಹೈಕೋರ್ಟ್ ನ  ಏಕಸದಸ್ಯ ಪೀಠ ತಳ್ಳಿ ಹಾಕಿತ್ತು.
ಇದನ್ನು ಪ್ರಶ್ನಿಸಿದ  ಕ್ರಿಕೆಟಿಗ ಗಂಭೀರ್ ಹಿರಿಯ ವಕೀಲ ರಾಜೀವ್ ನಾಯರ್ ಮುಖೇನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅವರು ಗೌತಮ್ ಗಂಭೀರ್ ಎಂದರೆ ತಕ್ಷಣ ಬರುವುದು ಕ್ರಿಕೆಟಿಗ ಗಂಭೀರ್ ಹೆಸರು ಮಾತ್ರವೇ, ಇನ್ನಾರದೂ ಅಲ್ಲ. ಹೀಗಾಗಿ ಬಾರ್, ಪಬ್ ಗಳಿಗೆ ಅವರ ಹೆಸರಿನ ಟ್ಯಾಗ್ ಲೈನ್ ಬಳಸುವುದಕ್ಕೆ ತಡೆ ನೀಡಬೇಕೆಂದು ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!