ದೇಶ

ಹೈಪಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ಭಾರತೀಯರೆ ಹೆಚ್ಚು ; ಇಸ್ರೇಲ್ ಪ್ರಧಾನಿ

ಅಹ್ಮದಾಬಾದಿನ ಡಿಯೋ ದೊಲೇರಾ ಗ್ರಾಮದಲ್ಲಿ ಸ್ಥಾಪಿಸಿರುವ ಐ ಕ್ರಿಯೇಟ್ ಸೆಂಟರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಇಂದು ಉದ್ಘಾಟಿಸಿದರು.

ಅಹ್ಮದಾಬಾದ್; ಅಹ್ಮದಾಬಾದಿನ ಡಿಯೋ ದೊಲೇರಾ ಗ್ರಾಮದಲ್ಲಿ ಸ್ಥಾಪಿಸಿರುವ ಐ ಕ್ರಿಯೇಟ್ ಸೆಂಟರನ್ನು  ಇಸ್ರೇಲ್ ಪ್ರಧಾನಿ ಬೆಂಜಮಿನ್  ನೇತಾನ್ಯಹು  ಇಂದು  ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭವಿಷ್ಯದ ಬಗ್ಗೆ  ಪ್ರಧಾನಿ ನರೇಂದ್ರಮೋದಿ  ಹಾಗೂ ತಮ್ಮ ಆಲೋಚನೆ ಒಂದೇ ರೀತಿಯಲ್ಲಿದೆ. ಹೈಪಾ ಸ್ವಾತಂತ್ರ್ಯಕ್ಕಾಗಿ ಅನೇಕ ಭಾರತೀಯರು ಹುತಾತ್ಮರಾಗಿದ್ದಾರೆ. ಆ ಪೈಕಿ ಗುಜರಾತಿನವರೇ ಅಧಿಕ ಮಂದಿ ತಮ್ಮ ಜೀವತೆತ್ತಿದ್ದಾರೆ. ಗುಜರಾತಿಗೆ ಧನ್ಯವಾದಗಳು  ಎಂದರು.  ವಿವಿಧ ಕ್ಷೇತ್ರಗಳಲ್ಲಾದ ತಂತ್ರಜ್ಞಾನ ಮತ್ತು ಆವಿಷ್ಕಾರಕ ಕೇಂದ್ರಗಳಿಗೂ ಈ ಉಭಯ ನಾಯಕರು ಭೇಟಿ ನೀಡಲಿದ್ದು,  ಭಾರತ- ಇಸ್ರೇಲ್ ಇನ್ನೋವೇಶನ್ ಚಾಲೆಂಜ್  -2017 ರಲ್ಲಿ ಆರು ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ  ನೀಡಿದ್ದಾರೆ. ಈ ಮೊಬೈಲ್ ಗಾಲ್ ವಾಹನ  ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಬನಸ್ಕಾಂತ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.  ನಂತರ ಅತ್ಯಾಧುನಿಕ ಬೀಜ ಉತ್ಪಾದನಾ  ಘಟಕ ಸ್ಥಾಪನೆ  ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು.

ಇದಕ್ಕೂ ಮುನ್ನ ಬೆಂಜಮಿನ್ ನೇತಾನ್ಯಾಹು, ಅವರ ಪತ್ನಿ ಸಾರಾ ಅವರು ಅಹಮದಾಬಾದಿನಲ್ಲಿ ಪ್ರಧಾನಿ ನರೇಂದ್ರಮೋದಿಯೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆರಂಭಗೊಂಡ ರೋಡ್ ಶೋ ,ಸಬರಮತಿ ಆಶ್ರಮದವರೆಗೂ ಸುಮಾರು 8 ಕಿಲೋ ಮೀಟರ್ ದೂರ ಸಾಗಿತು. ಸಬರಮತಿ ಆಶ್ರಮದಲ್ಲಿ ಮಹಾತ್ಮಗಾಂಧಿ ಚರಕದಲ್ಲಿ ಹತ್ತಿದಾರ ನೇಯುವ ಮೂಲಕ ನೇತ್ಯಾನಹು ವಿಶಿಷ್ಠ ಅನುಭವ ಪಡೆದರು.ವೀಕ್ಷಕರ ಪುಸ್ತಕದಲ್ಲಿ ಸಹಿ ಹಾಕಿದ ನೇತಾನಾಹ್ಯು ದಂಪತಿ, ಭೇಟಿ ವೇಳೆ ಮಹಾನ್ ಮಾನವತಾವಾದಿ ಮಹಾತ್ಮಗಾಂಧಿ ಅವರ ತತ್ತ್ವ ಆದರ್ಶಗಳಿಂದ ಪ್ರಭಾವಿತನಾಗಿರುವುದಾಗಿ ಪುಸ್ತಕದಲ್ಲಿ ನಮೂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!