ದೇಶ

ಇಸ್ರೇಲ್ ನಿಂದ ಭಾರತಕ್ಕೆ ಗಾಲ್ ಮೊಬೈಲ್ ಗಿಪ್ಟ್

ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ ನೀಡಿದ್ದಾರೆ.

ಅಹಮದಾಬಾದ್; ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಭಾರತಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, ಸಮುದ್ರದ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಮೊಬೈಲ್ ಘಟಕವನ್ನು ಭಾರತಕ್ಕೆ  ನೀಡಿದ್ದಾರೆ.

ಈ ಮೊಬೈಲ್ ಗಾಲ್ ವಾಹನ  ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಬನಸ್ಕಾಂತ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.  ಅಹ್ಮದಾಬಾದಿನ ಡಿಯೋ ದೋಲೇರಾ ಗ್ರಾಮದಲ್ಲಿ ಸ್ಥಾಪಿಸಿರುವ ಐ ಕ್ರಿಯೆಟ್ ನೀರು ಶುದ್ಧೀಕರಣ ಕೇಂದ್ರದ ಉದ್ಘಾಟನಾ  ಸಮಾರಂಭದಲ್ಲಿ  ನರೇಂದ್ರಮೋದಿ ಹಾಗೂ ನೇತಾನ್ಯಾಹು ಪಾಲ್ಗೊಂಡರು. ನಂತರ ಅತ್ಯಾಧುನಿಕ ಬೀಜ ಉತ್ಪಾದನಾ  ಘಟಕ ಸ್ಥಾಪನೆ  ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು.

ಇದಕ್ಕೂ ಮುನ್ನ  ಬೆಂಜಮಿನ್ ನೇತಾನ್ಯಾಹು, ಅವರ ಪತ್ನಿ ಸಾರಾ ಅವರು ಅಹಮದಾಬಾದಿನಲ್ಲಿ ಪ್ರಧಾನಿ ನರೇಂದ್ರಮೋದಿಯೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆರಂಭಗೊಂಡ ರೋಡ್ ಶೋ ,ಸಬರಮತಿ ಆಶ್ರಮದವರೆಗೂ ಸುಮಾರು 8 ಕಿಲೋ ಮೀಟರ್ ದೂರ ಸಾಗಿತು. ಸಬರಮತಿ ಆಶ್ರಮದಲ್ಲಿ ಮಹಾತ್ಮಗಾಂಧಿ ಚರಕದಲ್ಲಿ ಹತ್ತಿದಾರ ನೇಯುವ ಮೂಲಕ ನೇತ್ಯಾನಹು ವಿಶಿಷ್ಠ ಅನುಭವ ಪಡೆದರು.ವೀಕ್ಷಕರ ಪುಸ್ತಕದಲ್ಲಿ ಸಹಿ ಹಾಕಿದ ನೇತಾನಾಹ್ಯು ದಂಪತಿ, ಭೇಟಿ ವೇಳೆ ಮಹಾನ್ ಮಾನವತಾವಾದಿ ಮಹಾತ್ಮಗಾಂಧಿ ಅವರ ತತ್ತ್ವ ಆದರ್ಶಗಳಿಂದ ಪ್ರಭಾವಿತನಾಗಿರುವುದಾಗಿ ಪುಸ್ತಕದಲ್ಲಿ ನಮೂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT