ನವದೆಹಲಿ: ಮಾರ್ಚ್ 1, 2016 ರಂತೆ 4 ಲಕ್ಷಕ್ಕಿಂತಲೂ ಹೆಚ್ಚಿನ ಕೇಂದ್ರ ಸರ್ಕಾರಿ ಹುದ್ದೆಗಳು ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಾಗಿದ್ದವು ಎಂದು ಹಣಕಾಸು ಸಚಿವಾಲಯದ ವರದಿಯೊಂದು ತಿಳಿಸಿದೆ.
ಮಾರ್ಚ್ 1, 2013 ರಲ್ಲಿ 6 ಲಕ್ಷ ಇದ್ದ ಕೇಂದ್ರ ಸರ್ಕಾರದ ನಾಗರಿಕ ಉದ್ಯೋಗಗಳಲ್ಲಿನ ಹುದ್ದೆಯ ಸಂಖ್ಯೆ ಮಾರ್ಚ್ 1, 2014ರ ವೇಳೆಗೆ 4.21 ಲಕ್ಷಕ್ಕೆ ಇಳಿಯಿತು. ಮುಂದಿನ ವರ್ಷಗಳಲ್ಲಿ ಸಹ ಕೇಂದ್ರ ಸರ್ಕಾರಿ ಉದ್ಯೋಗಿಗಳ ಸಂಖ್ಯೆಯಲ್ಲಿ ಇಷ್ಟೇ ಪ್ರಮಾಣದಲ್ಲಿ ಕಡಿತವಾಗಿತ್ತು.
ಮಾರ್ಚ್ 1, 2016 ರಂತೆ ಒಟ್ಟು 'ಎ' ಗುಂಪಿನ ಖಾಲಿ ಹುದ್ದೆಗಳ ಸಂಖ್ಯೆ 15,284, ಬಿ (ಗೆಹೆಟೆಡ್) ಗುಂಪಿನಲ್ಲಿ 26,310, ಬಿ (ಗೆಹೆಟೆಡ್ ಅಲ್ಲದ) ಗುಂಪಿನಲ್ಲಿ 49,740 ಹುದ್ದೆಗಳು ಖಾಲಿ ಇದ್ದವು. ಇನ್ನು ಸಿ ಗುಂಪಿನ ಹುದ್ದೆಗಳಲ್ಲಿ 3,21,418 ರವರೆಗೆ ಖಾಲಿ ಉಳಿದಿದೆ. ಒಟ್ಟು ಖಾಲಿ ಹುದ್ದೆಯ ಸಂಖ್ಯೆ 4,12,752 ರಷ್ಟಿದೆ ಎಂದು ವರದಿ ಹೇಳಿದೆ. '2016-17ರವರೆಗೆ ಕೇಂದ್ರ ಸರ್ಕಾರಿ ನಾಗರಿಕ ಸೇವಾ ಉದ್ಯೋಗಿಗಳ ಪಾವತಿ ಮತ್ತು ಭತ್ಯೆ' ವರದಿಯಲ್ಲಿ ಈ ಅಂಕಿ ಅಂಶಗಳು ದಾಖಲಾಗಿದೆ.
ಒಟ್ಟು 36,33,935 ಅನುಮೋದಿತ ಹುದ್ದೆಗಳಲ್ಲಿ ಸರ್ಕಾರವು 32,21,183 ಹುದ್ದೆಗಳಿಗೆ ಅರ್ಹ ಉದ್ಯೋಗಿಗಳನ್ನು ನೇಮಕ ಮಾಡಿದೆ. 4,12,752 ಹುದ್ದೆಗಳು ಖಾಲಿ ಉಳಿದಿದ್ದು, ಇದು ಒಟ್ಟಾರೆ ಅನುಮೋದಿತ ಹುದ್ದೆಗಳ ಶೇ 11.36 ರಷ್ಟಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics