ದೇಶ

ಉಗ್ರರಿಂದ ಅಣು ಸಮರ ಸಾಧ್ಯತೆ: ಭಾರತೀಯ ಸೇನಾ ಮುಖ್ಯಸ್ಥ ರಾವತ್ ಎಚ್ಚರಿಕೆ

Srinivasamurthy VN
ನವದೆಹಲಿ: ಈಗಾಗಲೇ ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದು, ಭವಿಷ್ಯದಲ್ಲಿ ಅಣ್ವಸ್ತ್ರಗಳನ್ನೂ ಕೂಡ ಹೊಂದುವ ಮೂಲಕ ಅವರು ಪರಮಾಣು ಯುದ್ಧ ಘೋಷಣೆ ಮಾಡಬಹುದು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದೆ 2018ನೇ ಸಾಲಿನ ರೈಸಿನಾ ಸಂವಾದದಲ್ಲಿ ಮಾತನಾಡಿದ ಬಿಪಿನ್ ರಾವತ್ ಅವರು, ಭಾರತದ ಗಡಿ ನುಸುಳಿ ಬರುವ ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದು, ಭವಿಷ್ಯದಲ್ಲಿ ಅಣ್ವಸ್ತ್ರಗಳು ಕೂಡ ಅವರ  ಕೈವಶವಾಗುವ ಸಾಧ್ಯತೆ ಇದೆ. ಹೀಗಾಗಿ ಭವಿಷ್ಯದಲ್ಲಿ ದೇಶಕ್ಕೆ ಉಗ್ರರಿಂದ ಅಣು ಸಮರದ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಅಂತೆಯೇ ಉಗ್ರರಿಗೆ ಅಣ್ವಸ್ತ್ರಗಳು ಸುಲಭದಲ್ಲಿ ಕೈವಶವಾಗುವ ಅಪಾಯ ಇರುವುದರಿಂದ ಮನುಕುಲ  ನಾಶಕ್ಕೆ ಇದು ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. 
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಪರೋಕ್ಷ ದಾಳಿ ಮಾಡಿದ ಜನರಲ್‌ ರಾವತ್‌, ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಮತ್ತು ಅವುಗಳಿ ನೆರವು ನೀಡುವ ದೇಶಗಳನ್ನು ಪ್ರತ್ಯೇಕಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.  ಅಂತೆಯೇ  ಅತ್ಯಂತ ಸಕ್ರಿಯವಾಗಿರುವ ಉಗ್ರ ಇಂಟರ್‌ ನೆಟ್‌ ಜಾಲವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ. ಅಂತೆಯೇ ನಮ್ಮ ಸೈಬರ್ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ಕಣ್ಣಿಡಬೇಕಿದೆ ಎಂದು ಹೇಳಿದರು.
SCROLL FOR NEXT