ಶ್ರೀನಗರ: ಮುಗ್ದ ವಿದ್ಯಾರ್ಥಿಗಳನ್ನು ಉಗ್ರರೆಂದು ಸುದ್ದಿ ಪ್ರಕಟಿಸಿದ್ದ ಟಿವಿ ಮಾಧ್ಯಮಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರ, ಉಗ್ರ ಫರ್ಹಾನ್ ವಾನಿ ಹತ್ಯೆಯಾದ ಬಳಿಕ ಕೆಲ ಮಾಧ್ಯಮಗಳು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಫರ್ಹಾನ್ ಶಫಿ ಹಾಗೂ ಡಿಪ್ಲೋಮಾ ಮಾಡುತ್ತಿರುವ ಫರ್ಹಾನ್ ರಶೀದ್ ಎಂಬುವವರನ್ನು ಉಗ್ರರೆಂದು ಭಾವಚಿತ್ರಗಳನ್ನು ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಟಿವಿ ಮಾಧ್ಯಮಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಮುಗ್ದರಾಗಿದ್ದು, ವಾನಿ ಹತ್ಯೆ ದಿನದಂದು ಈ ಇಬ್ಬರ ಭಾವಚಿತ್ರಗಳನ್ನು ಉಗ್ರರೆಂದು ಮಾಧ್ಯಮಗಳು ಪ್ರಕಟಿಸಿವೆ ಈ ಹಿನ್ನಲೆಯಲ್ಲಿ ಮಾಧ್ಯಮಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜನವರಿ 9 ರಂದು ಲರ್ನೂ ಎಂಬ ಗ್ರಾಮದಲ್ಲಿ ಭಾರತೀಯ ಸೇನೆ ಫರ್ಹಾನ್ ವಾನಿಯನ್ನು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿತ್ತು.