ನಟ ರಜನಿಕಾಂತ್ 
ದೇಶ

6 ತಿಂಗಳಿದ್ದರೂ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ: ರಜನಿಕಾಂತ್

ರಾಜಕೀಯ ಪ್ರವೇಶ ಮಾಡುವುದಾಗಿ ಕೆಲ ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದ ನಟ ರಜನಿಕಾಂತ್ ಅವರು, 6 ತಿಂಗಳೊಳಗೆ ಚುನಾವಣೆ ನಡೆಸಿದರೂ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆಂದು ಬುಧವಾರ ಹೇಳಿದ್ದಾರೆ...

ಚೆನ್ನೈ: ರಾಜಕೀಯ ಪ್ರವೇಶ ಮಾಡುವುದಾಗಿ ಕೆಲ ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದ ನಟ ರಜನಿಕಾಂತ್ ಅವರು, 6 ತಿಂಗಳೊಳಗೆ ಚುನಾವಣೆ ನಡೆಸಿದರೂ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆಂದು ಬುಧವಾರ ಹೇಳಿದ್ದಾರೆ. 
ಅಭಿಮಾನಿಗಳ ಬಹುದಿನಗಳ ಆಶಯದಂತೆಯೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಡಿ.31 ರಂದು ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿದ್ದರು. ನೂತನ ಪಕ್ಷ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದ ರಜನಿ ಅವರು, ತಮ್ಮ ಪಕ್ಷ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತದೆ ಎಂದು ಹೇಳಿದ್ದರು. 
ಪಕ್ಷ ಸ್ಥಾಪನೆ ಕುರಿತು ಈಗಾಗಲೇ ಕಾರ್ಯಗಳನ್ನು ಆರಂಭಿಸಿರುವ ರಜನಿಕಾಂತ್ ಅವರು ತಮಗೆ ಹತ್ತಿರವಿರುವವರನ್ನು ಪಕ್ಷದೊಳಗೆ ಸೇರ್ಪಡೆಗೊಳಿಸಲು ಸಮಿತಿಯೊಂದನ್ನು ರಚನೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಪಕ್ಷ ಸ್ಥಾಪನೆಯ ಕಾರ್ಯಗಳು ಆರಂಭಗೊಂಡಿದ್ದು, ಪ್ರತೀ ಜಿಲ್ಲೆಯಲ್ಲಿ 5 ಲಕ್ಷ ಅಭಿಮಾನಿಗಳು ಸೇರಿದಂತೆ 60,000 ಫ್ಯಾನ್ಸ್ ಕ್ಲಬ್ ಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಸಿದ್ಧಗೊಳ್ಳುತ್ತಿವೆ. 
ನಿನ್ನೆಯಷ್ಟೇ ಕೌಲಾಲಂಪುರದಲ್ಲಿ ಸಮಾರಂಭವೊದರಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರು ಜೊತೆಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದ ರಜನಿಯವರು, ಕಮಲ್ ಹಾಸನ್ ಅವರು ನನಗಿಂತ ಮೊದಲೇ ರಾಜಕೀಯ ಪಕ್ಷ ಹುಟ್ಟು ಹಾಕುತ್ತಾರೆಂದು ನಾನು ಯೋಚಿಸಿದ್ದೆ, ಅವರಿಗೆ ಶುಭವಾಗಲಿ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!