ಬಿಹಾರದ ಕಾಲಚಕ್ರ ಮೈದಾನ (ಸಾಂದರ್ಭಿಕ ಚಿತ್ರ) 
ದೇಶ

ಬೋಧ್ ಗಯಾದಲ್ಲಿ ಎರಡು ಬಾಂಬ್ ಪತ್ತೆ: ದಲೈಲಾಮಗೆ ಬಿಗಿ ಬಂದೋಬಸ್ತ್

ರಸಿದ್ಧ ಧಾರ್ಮಿಕ ಕೇಂದ್ರ ಬೋಧ್ ಗಯಾದಲ್ಲಿ ನಿನ್ನೆ ರಾತ್ರಿ ಎರಡು ಬಾಂಬ್ ಪತ್ತೆಯಾಗಿದ್ದು, ಬೌಧ ಧರ್ಮಗುರು ದಲೈಲಾಮ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ: ಪ್ರಸಿದ್ಧ ಧಾರ್ಮಿಕ ಕೇಂದ್ರ ಬೋಧ್ ಗಯಾದಲ್ಲಿ ನಿನ್ನೆ ರಾತ್ರಿ ಎರಡು ಬಾಂಬ್  ಪತ್ತೆಯಾಗಿದ್ದು, ಬೌಧ ಧರ್ಮಗುರು ದಲೈಲಾಮ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾ ಡಿಐಜಿ ವಿನಯ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾಲಚಕ್ರ ಮೈದಾನದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವಾಗ  ಸುಧಾರಿತ ಪ್ರಮಾಣದ ಎರಡು ಬಾಂಬ್ ಮಾದರಿಯ ಸ್ಪೋಟಕಗಳು ಪತ್ತೆಯಾಗಿವೆ ಎಂದು ಪಾಟ್ನಾವಲಯದ ಐಜಿಪಿ ಎನ್. ಹೆಚ್. ಖಾನ್  ಹೇಳಿದ್ದಾರೆ.

ಕಾಲಚಕ್ರ ಮೈದಾನದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಚಿಂತಕ ದಲೈಲಾಮ ಅವರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು,ಟಿಪ್ಪನ್ ಬಾಕ್ಸ್ ಮಾದರಿಯ ವಸ್ತುವಿನಲ್ಲಿ ಬಾಂಬ್ ಇಡಲಾಗಿತ್ತು,ಇದರಿಂದಾಗಿ ಭಕ್ತಾಧಿಗಳು ಕೆಲಕಾಲ ಆತಂಕಕ್ಕೊಳಗಾಗಿದ್ದರು ಎಂದು ಅವರು ಹೇಳಿದರು.

ದಲೈಲಾಮ ಅವರ ಭಾಷಣ ಮುಗಿದ ಕೂಡಲೇ ಬಾಂಬ್ ಸ್ಪೋಟಿಸುವ ಸಂಚು ಇದಾಗಿದ್ದು,  ಪರಿಶೀಲನೆ ವೇಳೆ ಸುಟ್ಟು ಹೋಗಿರುವ ಧರ್ಮೋಸ್ ಪ್ಲಾಸ್ಕ್ ವೊಂದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಜನವರಿ 1 ರಲ್ಲೇ ದಲೈಲಾಮ ಬೋಧ್ ಗಯಾಕ್ಕೆ ಆಗಮಿಸಿದ್ದು, ಒಂದು ತಿಂಗಳ ಕಾಲ ಉಪನ್ಯಾಸ ನಡೆಸುವ ಸಾಧ್ಯತೆ ಇದೆ. ಇತ್ತೀಚಿಗೆಷ್ಟೇ ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,  ಹಾಲಿವುಡ್ ನಟ ರಿಚರ್ಡ್ ಗೆರ್  ಸೇರಿದಂತೆ ಹಲವು ಮಂದಿ ಗಣ್ಯರು ದಲೈಲಾಮ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದರು.2013ರಲ್ಲಿ ಮಹಾಬೋದಿ ದೇವಾಲಯ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐವರು ನಾಗರಿಕರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT