ಶಹರಾನ್ ಪುರ;ಉತ್ತರ ಪ್ರದೇಶದ ಶಹರಾನ್ ಪುರದಲ್ಲಿ ಸಮಾಜ ರಕ್ಷಿಸುವ ಪೊಲೀಸರು ಹೃದಯ ಹೀನರಂತೆ ವರ್ತಿಸಿದ್ದಾರೆ. ಅಪಘಾತದಿಂದ ತೀವ್ರ ರಕ್ತ ಸ್ರಾವವಾಗಿ ರಸ್ತೆ ಮೇಲೆ ಬಿದ್ದಿದ್ದ ಇಬ್ಬರು ಯುವಕರು , ಸಹಾಯಕ್ಕಾಗಿ ಅಂಗಲಾಚಿದ್ದರೂ ಕಲ್ಲು ಹೃದಯದ ಪೊಲೀಸರು ನೆರವು ನೀಡಿಲ್ಲ. ಪೆಟ್ರೋಲ್ ಕಾರಿನ ಸೀಟಿನ ಮೇಲೆ ರಕ್ತ ಬೀಳುತ್ತೆ ಅಂತಾ ಕಾಲಹರಣ ಮಾಡಿದ್ದಾರೆ. ಇದರಿಂದಾಗಿ ಆ ಯುವಕರು ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅರ್ಪಿತ್ ಖುರಾನ ಮತ್ತು ಸನ್ನಿ ಜಾರ್ಜ್ ಮತಪಟ್ಟು ದುರ್ದೈವಿಗಳು. ಇವರು ಚಲಾಯಿಸುತ್ತಿದ್ದ ಮೊಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ನೆರವು ನೀಡಿದ್ದು, ಪೊಲೀಸರ ಸಹಾಯಕ್ಕಾಗಿ ಪೋನ್ ಮಾಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮೂರು ಪೊಲೀಸರು , ಅಪಘಾತದಿಂದ ನರಳುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸದೆ ಅವರ ಸಾವಿಗೆ ಕಾರಣರಾಗಿದ್ದಾರೆ.
ಇದನ್ನು ನೋಡಿದ ಪ್ರತ್ಯೇಕ್ಷದರ್ಶಿಗಳು ಪೊಲೀಸರ ವರ್ತನೆಯನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸ್ಥಳದಲ್ಲಿ ಯಾವುದೇ ಕಾರಿಲ್ಲ. ಆಸ್ಪತ್ರೆಗೆ ಸೇರಿಸಿ ಅಂತಾ ಯುವಕರು ಗೋಳಾಡಿದ್ದರೂ ಪೊಲೀಸರು ಸ್ಪಂದಿಸಿಲ್ಲ,
ಪರಿಣಾಮ ಆ ಪೊಲೀಸರನ್ನು ಸೇವೆಯಿಂದ ಅಮಾನತುಗೊಂಡು ಮನೆ ಸೇರಿದ್ದಾರೆ.ಇದೊಂದು ದುರದೃಷ್ಟಕರ ಅಪಘಾತ. ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅವರನ್ನು ಸೇವೆಯಿಂದ ಅಮಾನತುಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಹರಾನ್ ಪುರ ವಲಯದ ಡಿಐಜಿ ಕೆ.ಎಸ್. ಇಮ್ಯಾನುವೆಲ್ ತಿಳಿಸಿದ್ದಾರೆ.