ದೇಶ

ಮುಜಫರ್‏ನಗರ್ ಗಲಭೆ: ಬಿಜೆಪಿ ನಾಯಕರ ವಿರುದ್ಧದ ಕೇಸ್ ವಾಪಸ್ ಪಡೆಯಲು ಯೋಗಿ ಚಿಂತನೆ

Nagaraja AB

ಮುಜಫರ್ ನಗರ್ : 2013ರಲ್ಲಿ ಸಂಭವಿಸಿದ್ದ ಮುಜಫರ್ ನಗರ್ ಗಲಭೆ ಸಂಬಂಧ ಬಿಜೆಪಿ ನಾಯಕರ ವಿರುದ್ದದ ಕೇಸ್ ಗಳನ್ನು ವಾಪಸ್ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿಂತನೆ ನಡೆಸಿದ್ದಾರೆ.

ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಮಾಜಿ ಕೇಂದ್ರ ಸಚಿವ ಸಂಜೀವ್ ಬಾಲ್ಯಾನ್, ಸಂಸದ ಭರ್ತೇಂದು ಸಿಂಗ್,  ಶಾಸಕ ಉಮೇಶ್ ಮಲ್ಲಿಕ್ ಹಾಗೂ ಬಿಜೆಪಿ ಪಕ್ಷದ ಮುಖಂಡೆ ಸಾದ್ನಿ ಪ್ರಾಚಿ ವಿರುದ್ಧ ಪ್ರಕರಣ ದಾಖಲಾಗಿತ್ತು,

 ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ  ಬಿಜೆಪಿ ನಾಯಕರ ವಿರುದ್ಧ ಪ್ರಕರಣ ವಜಾ ಮಾಡುವುದು ಸೇರಿದಂತೆ 13 ಅಂಶಗಳನ್ನೊಳಗೊಂಡ  ಪತ್ರವೊಂದನ್ನು
ಉತ್ತರ ಪ್ರದೇಶ ನ್ಯಾಯಾಂಗ ಇಲಾಖೆ ವಿಶೇಷ ಕಾರ್ಯದರ್ಶಿ ರಾಜ್ ಸಿಂಗ್ ,  ಜಿಲ್ಲಾ ಮ್ಯಾಜಿಸ್ಟ್ರೇಟ್  ಪತ್ರ ಬರೆದಿದ್ದು,ಈ ಪತ್ರವನ್ನು ಮುಜಫರ್ ನಗರ್ ಹಿರಿಯ ಪೊಲೀಸ್  ಅಧಿಕಾರಿಗೂ ಸಲ್ಲಿಸಿದ್ದಾರೆ.

ಆರೋಪಿಗಳು 2013 ಆಗಸ್ಟ್ ನಲ್ಲಿ   ಕಾನೂನುಬಾಹಿರವಾಗಿ ಮಹಾಪಂಚಾಯತ್ ನಲ್ಲಿ ಪಾಲ್ಗೊಂಡಿದಲ್ಲದೇ, ಪ್ರಚೋಧನಾತ್ಮಕ ಭಾಷಣ ಮಾಡಿದ್ದರು. ನಂತರ ಉಂಟಾದ ಕೋಮುಗಲಭೆಯಲ್ಲಿ 60 ಮಂದಿ ಸಾವನ್ನಪ್ಪಿದ್ದರು. ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಬೇರೆಡೆಗೆ ವಲಸೆ ಹೋಗಿದ್ದರು. ಈ ಪ್ರಕರಣದಲ್ಲಿ 22 ಹೋರಾಟಗಾರರ ವಿರುದ್ಧ ಐಸ್ ಐಟಿ ಆರೋಪ ಪಟ್ಟಿ ದಾಖಲಿಸಿತ್ತು.


 

SCROLL FOR NEXT